ಚಿಕ್ಕೋಡಿ: ಗರ್ಭಿಣಿಯು ತನ್ನ ೬ ನೇ ತಿಂಗಳಲ್ಲಿಯೇ ಜನಿಸಿದ ಎರಡು ಹೆಣ್ಣು ಶಿಶುಗಳನ್ನು ಆಧುನಿಕ ಚಿಕಿತ್ಸಾ ವಿಧಾನ ಬಳಸಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ ಘಟನೆ ಬೆಳಗಾವು ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ದೀಯಾ ಆಸ್ಪತ್ರೆಯಲ್ಲಿ ಅನಿತಾ ಸಾತ್ವಾರ ಅವರಿಗೆ ಡಿಸೆಂಬರ್ 24, 2024 ರಂದು ಜನಿಸಿದ ಎರಡು ಹೆಣ್ಣು ಶಿಶುಗಳನ್ನು ತಮ್ಮ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರಿಂದ ಜನಿಸಿದಾಗ 1ನೇ ಶಿಶುವಿನ ತೂಕ 830 ಗ್ರಾಂ, 2ನೇ ಶಿಶುವಿನ ತೂಕ 890 ಗ್ರಾಂ ಇತ್ತು.
ಎರಡು ತಿಂಗಳ ಕಾಲ ವಿಶೇಷ ಚಿಕಿತ್ಸೆ ನೀಡಿದ್ದರಿಂದ ಇದೀಗ ಶಿಶುಗಳ ತೂಕ ಕ್ರಮವಾಗಿ 1600 ಗ್ರಾಂ ಮತ್ತು 1580 ಗ್ರಾಂ ಇದೆ” ಎಂದು ಆಸ್ಪತ್ರೆಯ ವೈದ್ಯ ಡಾ. ಅಮಿತ ಮಗದುಮ್ ಹೇಳಿದರು. ಚಿಕ್ಕೋಡಿ ಪಟ್ಟಣದ ತಮ್ಮ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
Bigg Impact: ನಮ್ಮ ಮೆಟ್ರೋದಲ್ಲಿ ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ: ವರದಿ ಬಳಿಕ BMRCL ಸಿಬ್ಬಂದಿ ವಜಾ!
ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಇಂತಹ ಚಿಕಿತ್ಸೆ ನೀಡಲಾಗುತ್ತಿದ್ದರೂ ಒಂದೊಂದು ಬೇಬಿಗೆ 8- 10 ಲಕ್ಷ ರೂ. ವೆಚ್ಚವಾಗುತ್ತಿತ್ತು. ತಾವು ಕೇವಲ ಒಂದೊಂದು ಬೇಬಿಗೆ ಒಂದೂವರೆ ಲಕ್ಷ ರೂ. ವೆಚ್ಚ ಮಾಡಿ ಶಿಶುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಕಾಂಗರೂ ಮದರ್ ಕೇರ್ (ಕೆಂಎಸಿ) ಮಾಡುವ ಮೂಲಕ, ತಾಯಿ ತಂದೆಯರಲ್ಲಿ ಮನವರಿಕೆ ಮಾಡಿ ಮಕ್ಕಳನ್ನು ಉಳಿಸಿಕೊಂಡ ಹೆಮ್ಮೆ ತಮ್ಮ ಆಸ್ಪತ್ರೆಯದ್ದಾಗಿದೆ ” ಎಂದರು.