ಚಾಮರಾಜನಗರ: ಮಲೆಮಹದೇಶ್ವರಬೆಟ್ಟದಲ್ಲಿ ಮಾದಪ್ಪನ ಸನ್ನಧಿಯಲ್ಲಿ ಭಕ್ತನು ಸಾವನ್ನಪ್ಪಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ಭಕ್ತರೊಬ್ಬರು ಹೃದಯಾಘಾತದಿಂದ ಮೃತಟಪಟ್ಟಿದ್ದಾರೆ.
ತ್ರಿವಿಧ ದಾಸೋಹಿಗೆ 6ನೇ ಪುಣ್ಯಸ್ಮರಣೆ: ಇಂದು ಸಿದ್ಧಗಂಗಾ ಮಠದಲ್ಲಿ ಸಂಸ್ಮರಣೋತ್ಸವ!
ತಮಿಳುನಾಡಿನ ಸೇಲಂ ಜಿಲ್ಲೆಯ ಹೋಮಲೂರು ಗ್ರಾಮದ ಚಿನ್ನತಂಬಿ(60) ಮೃತಪಟ್ಟವರು. ಮಾದಪ್ಪನ ದರ್ಶನಕ್ಕೆ ಚಿನ್ನತಂಬಿ ಒಬ್ಬರೇ ಆಗಮಿಸಿ ದೇಗುಲದ ರಾಜಗೋಪುರ ಮುಂಭಾಗ ಭಕ್ತರು ತಂಗುವ ಸ್ಥಳದ ಸಮೀಪದಲ್ಲಿರುವ ಕೊಳವೆ ನಲ್ಲಿಯಲ್ಲಿ ತಲೆಗೆ ನೀರು ಹಾಕಿಕೊಳ್ಳುತ್ತಿದ್ದಾಗ ಇದ್ದಕ್ಕಿಂದ್ದಂತೆಯೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಹೃದಯಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲಿಸಿ ವಿಳಾಸವನ್ನು ಪತ್ತೆ ಹೆಚ್ಚಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಗಮಿಸಿದ ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ದರು