ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಜೂನ್ 03 ರಂದು ಚುನಾವಣೆ ನಡೆಯಲಿದ್ದು ಇಂದು ಬೆಂಗಳೂರು ಪದವೀದರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಆರ್.ಎಸ್. ಉದಯ್ ಸಿಂಗ್ ರವರು ಆನೇಕಲ್ ಪಟ್ಟಣದಲ್ಲಿರುವ ಶಿಕ್ಷಣ ಪ್ರೇಮಿ ಜಿಎಂಆರ್ ರವರ ಮನೆಗೆ ಆಗಮಿಸಿ ಮತಯಾಚನೆ ನಡೆಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು.
ಕಳೆದ ಹತ್ತಾರು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ವಂದಿಸಿದ್ದೇನೆ, ಪದವೀದರರ ಮತ್ತು ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂಬುವ ಉದ್ದೇಶದಿಂದ ಬೆಂಗಳೂರು ಪದವೀದರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದೇನೆ. ಈ ಹಿಂದೆ ಹಲವು ವರ್ಷಗಳಿಂದ ಬೆಂಗಳೂರು ಪದವೀಧರ ಕ್ಷೇತ್ರದ ಪ್ರತಿನಿಧಿಗಳು ಎಂದು ಹೇಳಿಕೊಂಡು ಅ.ದೇವೇಗೌಡ ಮತ್ತು ರಾಮೋಜಿಗೌಡ ತಿರುಗಾಡುತ್ತಿದ್ದಾರೆ.
ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡೋ ಅಭ್ಯಾಸವಿದ್ಯಾ..? ಹಾಗಾದ್ರೆ ಇಂದೇ ಬಿಟ್ಟುಬಿಡಿ
ಆದ್ರೆ ಅದೆಷ್ಟೋ ಪದವಿ ಪಡೆದ ಪದವೀಧರರು ಕೆಲಸ ಸಿಗದೆ ಬೀದಿ ಬೀದಿಗಳಲ್ಲಿ ಅಲೆದಾಟ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಅವರ ಬೇಡಿಕೆಗಳು ಸಹ ಈಡೇರಿಕೆಗೆಯಾಗಲ್ಲ. ಹೀಗಾಗಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾದ ಅ.ದೇವೇಗೌಡ ಮತ್ತು ರಾಮೋಜಿಗೌಡರ ಕೊಡುಗೆ ಶೂನ್ಯವಾಗಿದೆ. ಜೂನ್ 03 ರಂದು ನಡೆಯಲಿರುವ ಚುನಾವಣೆಯಲ್ಲಿ ಪದವೀದರರು ಕ್ರಮ ಸಂಖ್ಯೆ 6ಕ್ಕೆ ಮತ ನೀಡುವ ಮೂಲಕ ನನ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.