ಬೆಂಗಳೂರು:-ರಾಜ್ಯದಲ್ಲಿ ಹಸುಗಳನ್ನ ಮಾರಣಾಂತಿಕ ಕಾಯಿಲೆ ಕಾಡುತ್ತಿದ್ದು, ಕಾಯಿಲೆಯ ಸುಳಿವೆ ಗೊತ್ತಾಗದೇ ಏಕಾಏಕಿ ಹಸುಗಳು ಸಾವನ್ನಪ್ಪುತ್ತಿವೆ.
ರಾಜಧಾನಿ ಬೆಂಗಳೂರಿನಲ್ಲಿಯೂ ಢವ ಢವ ಶುರುವಾಗಿದೆ. ರಾಮನಗರ ಪುಣ್ಯಕೋಟಿ ಗೋಶಾಲೆಯಲ್ಲಿ ಕೇವಲ 11ದಿನಗಳಲ್ಲಿ 25 ಹಸುಗಳು ಸಾವನ್ನಪ್ಪುತ್ತಿವೆ. ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪುತ್ತಿವೆ.
ಗ್ಯಾರಂಟಿ ತಂದ ಸಂಕಷ್ಟ: KSRTCಗೆ ಸುಪ್ರೀಂನಿಂದ ಬಿಗ್ ಶಾಕ್! ಖಾಸಗಿ ಬಸ್ಗಳು ಸಂತಸ!
ತೀವ್ರ ಹೊಟ್ಟೆ ನೋವಿನಿಂದ ಬಳಲಿ ಕೇವಲ ಒಂದು ದಿನದಲ್ಲೇ ಜಾನುವಾರುಗಳು ಸಾವನ್ನಪ್ಪುತ್ತಿವೆ. ಜಾನುವಾರುಗಳ ಶವ ಪರೀಕ್ಷೆಯಲ್ಲಿ ಹೆಮಾರಾಜಿಕ್ ಬೋವೆಲ್ ಸಿಂಡ್ರೋಮ್ ಇರುವ ಶಂಕೆ ವ್ಯಕ್ತವಾಗಿದೆ. ಈ ಹೆಮಾರಾಜಿಕ್ ಬೋವೆಲ್ ಸಿಂಡ್ರೋಮ್ ಅಂದ್ರೆ ತೀವ್ರ ಕರುಳಿನ ರಕ್ತ ಸ್ರಾವ. ಸಾವನ್ನಪ್ಪಿರುವ ಹಸುಗಳ ಸಗಣಿಯಲ್ಲಿ ಮ್ಯೂಕಸ್ ಅಂಶ ಪತ್ತೆಯಾಗಿದೆ.
ಹಸುಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ 24 ಗಂಟೆಯಿಂದ 72 ಗಂಟೆಯೊಳಗೆ ಬಳಲಿ ಹಸುಗಳು ಸಾವನ್ನಪ್ಪುತ್ತಿವೆ. ಶಿವಮೊಗ್ಗ, ಶಿರಸಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಜಾನುವಾರುಗಳಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.
ಏಕಾಏಕಿ ಹಸುಗಳ ಸಾವಿನಿಂದ ಗೋಶಾಲೆಗಳು ಹಾಗೂ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಾಯಿಲೆ ಬಂದ 100ಹಸುಗಳಲ್ಲಿ 85ರಿಂದ 90ಹಸುಗಳು ಸಾವನ್ನಪ್ಪುವ ಚಾನ್ಸ್ ಇದೆ ಎಂದು ಹೇಳಲಾಗಿದೆ. ಹೀಗಾಗಿ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕೆಂದು ಗೋಪಾಲಕರು ಮನವಿ ಮಾಡುತ್ತಿದ್ದಾರೆ. ಕೂಡಲೇ ಈ ಕಾಯಿಲೆ ಬಗ್ಗೆ ತಜ್ಞರ ಸಮಿತಿ ರಚಿಸಿ ರೋಗ ತಡೆಗಟ್ಟುವ ಕ್ರಮ ಕೈಗೊಳ್ಳಬೇಕು. ಜೊತೆಗೆ ಹಸುಗಳ ಸಾವಿಗೆ ರೈತರಿಗೆ ಹಾಗೂ ಗೋಪಾಲಕರಿಗೆ ಪರಿಹಾರ ನೀಡಬೇಕು ಎಂದು ಪುಣ್ಯಕೋಟಿ ಗೋಶಾಲೆಯವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.