ಅಮರಾವತಿ: ದಲಿತ ಯುವಕನ (Dalit Youth) ಮೇಲೆ ಆರು ಜನರ ಗ್ಯಾಂಗ್ವೊಂದು ಹಲ್ಲೆ ನಡೆಸಿದ್ದು, ನೀರು ಕೇಳಿದಾಗ ಮೂತ್ರ ವಿಸರ್ಜಿಸಿರುವ (Urinate) ಅಮಾನವೀಯ ಕೃತ್ಯ ಆಂಧ್ರಪ್ರದೇಶದ (Andhra Pradesh) ಎನ್ಟಿಆರ್ (NTR) ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ದಲಿತ ಯುವಕನನ್ನು ಆರು ಮಂದಿ ಆರೋಪಿಗಳು ಸೇರಿಕೊಂಡು ಸತತ ನಾಲ್ಕು ಗಂಟೆಗಳ ಕಾಲ ಥಳಿಸಿದ್ದು, ನೀರು ಕೇಳಿದಾಗ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಘಟನೆ ಮುನ್ನೆಲೆಗೆ ಬಂದ ನಂತರ, ತೆಲುಗು ದೇಶಂ ಪಕ್ಷದ (TDP) ಪರಿಶಿಷ್ಟ ಜಾತಿ (SC) ಸೆಲ್ ಪ್ರತಿಭಟನೆ ಯನ್ನು ನಡೆಸಿದ್ದು, ರಸ್ತೆಗಳನ್ನು ನಿರ್ಬಂಧಿಸಿದೆ. ಟಿಡಿಪಿ ಎಸ್ಸಿ ಸೆಲ್ ಅಧ್ಯಕ್ಷ ಎಂಎಂಎಸ್ ರಾಜು ನೇತೃತ್ವದಲ್ಲಿ ಕಂಚಿಕಚೆರ್ಲಾ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿದೆ.