ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆಯಾಗಿದ್ದು ಅಥಣಿ ಪಟ್ಟಣದ ಮಧಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ನಾನಾಸಾಹೇಬ್ ಬಾಬು ಚೌವ್ಹಾಣ್ (58) ಜಯಶ್ರೀ ನಾನಾಸಾಹೇಬ್ ಚೌವ್ಹಾಣ್ (50) ಮೃತ ದುರ್ದೈವಿಗಳಾಗಿದ್ದು.
ಮನೆಯ ಸುತ್ತಲೂ ದುರ್ವಾಸನೆ ಹೊಡೆಯುತ್ತಿದ್ದ ಕಾರಣ ಸಾರ್ವಜನಿಕರು ನೀಡಿದ ದೂರು ಆಧರಿಸಿ ಪೋಲಿಸರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ದಂಪತಿಗಳ ಸಾವು ನಡೆದಿರುವ ಶಂಕೆ ವ್ಯಕ್ತವಾಗಿದ್ದು.ಕಳೆದ ಹಲವು ತಿಂಗಳಿಂದ ಮೃತ ದಂಪತಿಗಳ ಮಗ ಕಳುವು ಪ್ರಕರಣದಲ್ಲಿ ಪೋಲಿಸರಿಂದ ಭಂದಿತನಾಗಿ ಸೆರೆವಾಸದಲ್ಲಿದ್ದಾನೆ ಎಂದು ತಿಳಿದು ಬಂದಿದೆ.ಮನೆಯಲ್ಲಿ ದಂಪತಿಗಳು ಇಬ್ಬರೆ ವಾಸವಾಗಿದ್ದರು ಎನ್ನಲಾಗಿದೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು.
PMKSY: ರೈತರೇ ಗಮನಿಸಿ.. “ಕೃಷಿ ಸಿಂಚಾಯಿ ಯೋಜನೆ”ಯಡಿಯಲ್ಲಿ ನಿಮಗೆ ಸಿಗಲಿದೆ ಶೇ. 90 ರಷ್ಟು ಸಹಾಯ ಧನ!
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಳಗಾವಿ ಎಸ್ ಪಿ ಡಾಕ್ಟರ್ ಭೀಮಾಶಂಕರ ಗುಳೇದ ಸ್ಥಳ ಮಹಜರು ಹಾಗೂ ವೈದ್ಯಕೀಯ ತಪಾಸಣೆ ವೇಳೆ ಗಾಯದ ಗುರುತು ಪತ್ತೆಯಾಗಿದ್ದು ಮನೆಯ ಬಾಗಿಲು ಮುರಿದಿರುವ ಮತ್ತು ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆ ಆಗಿರುವ ಸಾಧ್ಯತೆ ಇದ್ದು ತನಿಖೆ ಮುಂದುವರಿದಿದೆ ಎಂದಿದ್ದಾರೆ.