ಬೆಂಗಳೂರು ಗ್ರಾಮಾಂತರ:- ರಾಜ್ಯ ಗಡಿಭಾಗ ತಮಿಳುನಾಡಿನ ಥಳಿರಸ್ತೆಯ ಉಳಿವೀರಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ಬೈಕ್ ಸಾಗಿಸುತ್ತಿದ್ದ ಕಂಟೈನರ್ಗೆ ಬೆಂಕಿ ತಗುಲಿ ಕಂಟೈನರ್ ಜೊತೆಗೆ 20 ಎಲೆಕ್ಟ್ರಾನಿಕ್ ಬೈಕ್ಗಳು ಬೆಂಕಿಗಾಹುತಿಯಾದ ಘಟನೆ ಜರುಗಿದೆ.
ಕಂಪನಿಯಿಂದ 40 ಎಲೆಕ್ಟ್ರಾನಿಕ್ ಬೈಕ್ಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನ, ಬೆಂಗಳೂರಿನ ಜಯನಗರ ಶೋ ರೂಮ್ಗೆ ಬರಬೇಕಿತ್ತು. ಆದರೆ, ಮಾರ್ಗ ಮಧ್ಯೆ ರಸ್ತೆಯಲ್ಲಿಯೇ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಗುಲಿದ ಕೂಡಲೇ ಕಂಟೈನರ್ ಧಗದಧಗನೆ ಹೊತ್ತಿ ಉರಿದಿದ್ದು. ವಾಹನದಲ್ಲಿದ್ದ 40 ಎಲೆಕ್ಟ್ರಾನಿಕ್ ಬೈಕ್ಗಳ ಪೈಕಿ 20 ಬೈಕ್ಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಮತ್ತಿಗೆರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)