ರಾಯಚೂರು : ರಾಯಚೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಕತ್ತು ಸೀಳಿ ಹತ್ಯೆಗೈಯ್ಯಲಾಗಿದೆ.ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿ ಘಟನೆ ನಡೆದಿದ್ದು, ಶಿಫಾ (22)ಕೊಲೆಯಾದ ವಿದ್ಯಾರ್ಥಿನಿ.
ಮೂಲತಃ ಲಿಂಗಸುಗೂರಿನ ವಿದ್ಯಾರ್ಥಿನಿ ಶಿಫಾ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂಎಸ್ ಸಿ ಓದುತ್ತಿದ್ದಳು. ಇಂದು ಬೆಳಿಗ್ಗೆ ಲಿಂಗಸುಗೂರಿನಿಂದ ಸಿಂಧನೂರಿಗೆ ಕಾಲೇಜಿಗೆ ಹೋಗಿದ್ದ ಶಿಫಾಳ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಸಿಂಧನೂರು ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮುಬಿನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ..ಆರೋಪಿ ಮುಬಿನ್ ಕಾಲೇಜಿಗೆ ತೆರಳುತ್ತಿದ್ದ ಶಿಫಾಳನ್ನು ಮಾತನಾಡಬೇಕೆಂದು ಕರೆದಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಕಾಲೇಜಿಗೆ ಹೋಗದೆ ಮುಬಿನ್ ಜೊತೆ ಮಾತನಾಡಲು ಹೋಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮುಬಿನ್ ಚೂರಿ ತೆಗೆದು ಶಿಫಾಳ ಕತ್ತು ಸೀಳಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿಫಾ ಮೃತಪಟ್ಟಿದ್ದಾಳೆ