ಗುರು ಬ್ರಹ್ಮ, ಗುರು ವಿಷ್ಟು, ಗುರು ದೆವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಸಿ ಗುರುವೇ ನಮಃ ಎಂದು ಕರೆಯುತ್ತಾರೆ. ಗುರುವಿಗೆ ಅಷ್ಟೊಂದು ಗೌರವ ಕೊಡಲಾಗುತ್ತದೆ. ಆದರೆ ಕೆಲ ಗುರುಗಳು ಮಾಡುವ ತಪ್ಪಿನಿಂದ ಇಡೀ ಗುರುಗಳೇ ತಲೆ ತಗ್ಗಿಸುವಂತಾಗುತ್ತಿದೆ. ಇಂತದ್ದೆ ಒಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹಾಗಾದರೆ ಅಲ್ಲಿ ನಡೆದ ಘಟನೆಯಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…
ಹೌದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲನ ಕರ್ಮಕಾಂಡ್ ಬಯಲಾಗಿದೆ. ಈತ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವದು ಮಾಡುತ್ತಿದ್ದ ಎಂದ ಸ್ವತಃ ಈತನಿಂದ ನೊಂದಂತ ವಿದ್ಯಾರ್ಥಿನಿಯರು ಮನಗೂಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನಗೂಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಚೀನಕುಮಾರ ಪಾಟೀಲ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಅದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಂದ ಕೇಸ್ ದಾಖಲಿಸಿದ್ದಾರೆ. ದೂರಿನಲ್ಲಿ ದಿನನಿತ್ಯ ಕಾಲೇಜಿನಲ್ಲಿ ನನ್ನೊಂದಿಗೆ ಸಹಕರಿಸುವಂತೆ ಕಿರಿಕಿರಿ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಜೊತೆಗೆ ಚಾಟಿಂಗ್ ಮಾಡಿ ಸಹಕರಿಸುವಂತೆ ಕೇಳುತ್ತಿದ್ದ ಎಂಬ ವಿಚಾರವಾಗಿ ಸಹಿತ ದೂರಿನಲ್ಲಿ ಉಲ್ಲೇಸಲಾಗಿದೆ.
Vastu Tips: ಅಪ್ಪಿ ತಪ್ಪಿಯೂ ಚಪ್ಪಲಿಗಳನ್ನು ತಲೆಕೆಳಗಾಗಿ ಇಡಲೇಬಾರದು..! ಯಾಕೆ ಗೊತ್ತಾ..?
ಇನ್ನೂ ಪ್ರೀನ್ಸಿಪಾಲ್ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಪ್ರೀನ್ಸಿಪಾಲ್ ಮಾಡಿದ ಚಾಟಿಂಗ್ ವೇಳೆ ವಿಡಿಯೋ ಕಾಲು ಮಾಡಿ ಅಂತಾ ವಿದ್ಯಾರ್ಥಿನಿಗೆ ಪೀಡಿಸಿದ್ದಾರೆ, ಜೊತೆಗೆ ಚಾಟಿಂಗ್ ನಲ್ಲಿ ನಿನ್ನ ಬಹಳಷ್ಟು ಹಚ್ಚಿಕೊಂಡಿರುವೆ ಅಡ್ಜೆಸ್ಟ್ ಆಗು ಎಂದೆಲ್ಲ ಮೆಸೇಜ್ ಮಾಡಿದ್ದಾನೆ. ಇನ್ನೂ ವಿದ್ಯಾರ್ಥಿ ನಿಯರು ತಮ್ಮ ತಮ್ಮ ಮದ್ಯೆ ಚರ್ಚೆ ಮಾಡುವಾಗ ಈ ಪ್ರಿನ್ಸೀಪಾಲ್ ನ ನಿಜ ಬಣ್ಣ ಬಯಲಾಗಿದೆ.
ಇನ್ನೂ ಆತ ತನ್ನ ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿರುವ ವಿಚಾರ ಸಹಿತ ದೂರಿನಲ್ಲಿ ದಾಖಲು ಮಾಡಿದ್ದಾರೆ. ಇನ್ನೂ ಆತನಿಗೆ ಸಹಕರಿಸದಿದ್ದರೆ ಅವರಿಗೆ ಫೇಲ್ ಕೂಡಾ ಮಾಡುತ್ತಿದ್ದ ಎನ್ನಲಾಗುತ್ತಿದೆ. ಇನ್ನೂ ಮನಗೂಳಿ ಠಾಣೆಯಲ್ಲಿ ಈ ವಿಚಾರದಲ್ಲಿ ದೂರು ದಾಖಲಾಗುತ್ತಲೇ ಪೋಲಿಸರು ಎಚ್ಚೆತ್ತುಕೊಂಡು ಆತನನ್ನು ಬಂಧಿಸಿದ್ದಾರೆ.
ಇನ್ನೂ ಮಹಿಳೆಯ ವಿಚಾರವಾದ ಕಾರಣ ಸುಪ್ರೀಂ ಕೊರ್ಟ್ ಗೈಡ್ ಲೈನ್ಸ್ ಪ್ರಕಾರ ನಾನು ಮಾತನಾಡಲು ಬರಲ್ಲ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರು ಪ್ರೀನ್ಸಿಪಾಲ್ ಸಚೀನಕುಮಾರ ಪಾಟೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಪೋಲಿಸರ ವಿಚಾರಣೆ ಬಳಿಕ ಈ ಪ್ರಕರಣದ ಇನ್ನಷ್ಟು ಸತ್ಯಾಂಶ ಹೊರ ಬರಲಿದೆ.