ಬೆಂಗಳೂರು: ಅದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್. ಹೈಜೆನಿಕ್, ನೀಟ್ನೆಸ್ ಇರುತ್ತೆ ಅಂತಲೇ ಸಾಕಷ್ಟು ಮಂದಿ ಅಲ್ಲಿ ಊಟಕ್ಕೆ ಹೋಗ್ತಾರೆ. ಆದ್ರೆ ಇಂತ ಹೋಟೆಲ್ನ ಊಟದಲ್ಲಿ ಜಿರಳೆ ಸಿಕ್ಕಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು ಅಂತ ಹೇಳ್ತೀವಿ ನೋಡಿ. ರಾಜಧಾನಿಯಲ್ಲಿ ಮನೆ ಊಟಕ್ಕಿಂತ ಹೋಟೆಲ್ ಊಟ ನೆಚ್ಚಿಕೊಂಡವರೇ ಹೆಚ್ಚು. ಅದರಲ್ಲೂ ಆರೋಗ್ಯದ ದೃಷ್ಠಿಯಿಂದ ಶುಚಿಯಾಗಿ ಅಡುಗೆ ಮಾಡೋ ಹೋಟೆಲ್ಗಳ ಕಡೆಯೇ ಜನರು ಹೆಚ್ಚಾಗಿ ಹೋಗ್ತಾರೆ.ಆದ್ರೆ ಇಂತ ಹೈಜೆನಿಕ್, ನೀಟ್ನೆಸ್ ಇದೆ ಅನ್ಕೊಂಡು ಹೈಕೋರ್ಟ್ ವಕೀಲೆಯೊಬ್ಬರು ಪ್ರತಿಷ್ಠಿತ ಹೋಟೆಲ್ಗೆ ಊಟಕ್ಕೆಂದು ಹೋದಾಗ ಆಗಿದ್ದೇ ಬೇರೆ.
ಹೌದು . ಬೆಂಗಳೂರಿನ ಹೃದಯಭಾಗದಲ್ಲಿರೋ ಕ್ಯಾಪಿಟಲ್ ಹೋಟೆಲ್ನಲ್ಲಿ ಊಟದ ವಿಚಾರಕ್ಕೆ ಹೈಡ್ರಾಮಾವೇ ನಡೆದಿದೆ. ನಿನ್ನೆ ಮದ್ಯಾನ ಊಟಕ್ಕೆಂದು ಹೈಕೋರ್ಟ್ ವಕೀಲೆ ಶೀಲಾ ದೀಪಕ್ ತಮ್ಮ ಸಹೋದ್ಯೋಗಿ ಜೊತೆ ಕ್ಯಾಪಿಟಲ್ ಹೋಟೆಲ್ಗೆ ಹೋಗಿದ್ದಾರೆ. ಬಳಿಕ ಕೆಲವು ಐಟಂಗಳ ಜೊತೆ ಪನ್ನಿರ್ ಬಟರ್ ಮಸಾಲ ಕೂಡ ಆರ್ಡರ್ ಮಾಡಿದ್ರು. ಆದ್ರೆ ಊಟ ಮಾಡುವ ವೇಳೇ ಪನ್ನೀರ್ ಬಟರ್ ಮಸಾಲದಲ್ಲಿ ಜಿರಳೆ ಪತ್ತೆಯಾಗಿದೆ. ಇದನ್ನ ಕಂಡು ಶಾಕ್ ಆದ ವಕೀಲೆ, ಹೋಟೆಲ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ್ರು. ಬಳಿಕ ಹೋಟೆಲ್ ಕಿಚನ್ ರೂಂಗೆ ಹೋಗಿ ನೋಡಿದ್ರೆ ಅದರ ಬಂಡವಾಳವೂ ಬಯಲಾಗಿತ್ತು.
Stomach Pain: ತಿಂದ ಕೂಡಲೇ ಹೊಟ್ಟೆ ನೋವಾಗುತ್ತ.? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ
ಊಟದಲ್ಲಿ ಪತ್ತೆಯಾದ ಜಿರಳೆ ಮತ್ತು ಅಡುವೆ ಮನೆಯ ದುಸ್ಥಿತಿ ಬಗ್ಗೆ ವಕೀಲೆ ಶೀಲಾ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ. ಆದ್ರೆ ಹೋಟೆಲ್ ಸಿಬ್ಬಂದಿ ವಕೀಲೆ ಜೊತೆಯೇ ಅನುಚಿತವಾಗಿ ವರ್ತಿಸಿದ್ದಾರಂತೆ. ಅಷ್ಟಲ್ಲದೇ ವಕೀಲೆಯನ್ನ ತಳ್ಳಾಡಿ, ಜೀವ ಬೆದರಿಕೆ ಹಾಕಿದ್ದಾರಂತೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಸಿಬ್ಬಂದಿ ವಿರುದ್ಧ FIR ಕೂಡ ದಾಖಲಾಗಿದ್ದು,
ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಘಟನೆ ನಡೆದಾಗ ಸ್ಥಳೀಯ ಫುಡ್ ಆಫಿಸರ್ ಸುಬ್ರಮಣ್ಯ ಎಂಬುವರಿಗೆ ಶೀಲಾ ದೀಪಕ್ ಕರೆ ಮಾಡಿದ್ದಾರೆ. ಆದ್ರೆ ಫುಡ್ ಆಫಿಸರ್ ಸ್ಥಳಕ್ಕೆ ಬಾರದೆ, ರಾತ್ರಿಯಾಗಿದೆ, ಟ್ರಾಫಿಕ್ ಜಾಮ್ ಇದೆ ಅಂತ ಸಬೂಬು ಹೇಳಿದ್ದಾರೆ. ಇದರಿಂದ ಫುಡ್ ಡಿಪಾರ್ಟ್ಮೆಂಟ್ ಗೂ ಶೀಲಾ ದೀಪಕ್ ದೂರು ನೀಡಿದ್ದು ಹೋಟೆಲ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಒಟ್ನಲ್ಲಿ ಆರೋಗ್ಯದ ದೃಷ್ಟಿಯಿಂದ ಶುಚಿಯಾಗಿರೋ ಹೋಟೆಲ್ ಬೇಕೆಂದು ದುಬಾರಿ ಹೋಟೆಲ್ಗಳಿಗೆ ಹೋಗೋರು ಎಚ್ಚರಿಕೆಯಿಂದ ಇರೋದು ಒಳ್ಳೆದು.