ಇತ್ತೀಚಿನ ದಿನಗಳಲ್ಲಿ ದಂಪತಿಗಳು ಒಂದೇ ಮಗು ಸಾಕು ಎನ್ನುವಲ್ಲಿಗೆ ಬಂದು ತಲುಪಿದ್ದಾರೆ.
ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿ ಬಾಲಕಿಯೊಬ್ಬಳು, ‘ನನಗೆ ಆಟ ಆಡಲು ಯಾರು ಇಲ್ಲ, ನಾನು ಒಂಟಿ’ ಎಂದು ತಂದೆ ತಾಯಿಯ ಮುಂದೆ ಕಣ್ಣೀರು ಸುರಿಸುತ್ತಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಲಕಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದಿನ ಜೀವನ ಶೈಲಿ ಹಾಗೂ ಕುಟುಂಬ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದೆ. ನಗರ ಸೇರಿದಂತೆ ಹಳ್ಳಿ ಪ್ರದೇಶಗಳಲ್ಲಿಯೂ ಕೂಡು ಕುಟುಂಬದ ಬದಲಾಗಿ ವಿಭಕ್ತ ಕುಟುಂಬಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದಲ್ಲದೇ ಉದ್ಯೋಗದಲ್ಲಿರುವ ದಂಪತಿಗಳು ಒಂದೇ ಒಂದು ಮಗು ಸಾಕು ಎನ್ನುವಲ್ಲಿಗೆ ಬಂದು ತಲುಪಿದ್ದಾರೆ. ಉದ್ಯೋಗದಲ್ಲಿರುವ ದಂಪತಿಗಳಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವಿಲ್ಲ.ಅದಲ್ಲದೇ, ಒಂದು ಮಗುವನ್ನು ಸಾಕುವುದೇ ಕಷ್ಟವೆನ್ನುವಂತಾಗಿದೆ. ವೆಚ್ಚಗಳು ಹೆಚ್ಚಾಗುತ್ತಿದ್ದಂತೆ ಮಕ್ಕಳಿಗೆ ಯಾವುದೇ ಕೊರತೆಯೂ ಬಾರದಂತೆ ನೋಡಿಕೊಳ್ಳಬೇಕೆನ್ನುವ ಇಚ್ಛೆ ತಂದೆತಾಯಿಯರದ್ದು. ಹೀಗಾಗಿ ಒಂದೇ ಮಗು ಸಾಕು, ಆ ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮ ಜೀವನಕಟ್ಟಿಕೊಡಬೇಕೆಂದು ಕೊಂಡು ಫ್ಯಾಮಿಲಿ ಪ್ಲಾನಿಂಗ್ ನತ್ತ ಗಮನ ಹರಿಸುತ್ತಿದ್ದಾರೆ.
ಇದರ ನಡುವೆ ಒಂಟಿಯಾಗಿ ಬೆಳೆಯುವ ಮಗುವಿಗೆ ತನ್ನವರು ಯಾರು ಇಲ್ಲ ಎನ್ನುವ ಭಾವವೊಂದು ಮೂಡುತ್ತದೆ. ಕೆಲವು ಮಕ್ಕಳು ತಮ್ಮ ನಡವಳಿಕೆಯಲ್ಲಿ ವ್ಯಕ್ತಪಡಿಸುತ್ತಾರೆ. ಇಂತಹದೊಂದು ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ‘ಸ್ಕೂಲ್ ನಲ್ಲಿರುವ ಎಲ್ಲರಿಗೂ ಅಕ್ಕ ತಮ್ಮ, ಅಣ್ಣ ತಂಗಿಯಿದ್ದಾರೆ ನನಗೆ ಯಾರು ಇಲ್ಲ ಎಂದು ತನ್ನ ತಂದೆ ತಾಯಿಯ ಮುಂದೆ ಅಳುತ್ತಿರುವ ಪುಟ್ಟ ಬಾಲಕಿಯೂ ವಿಡಿಯೋ ಇದಾಗಿದೆ.
ಈ ವಿಡಿಯೋವನ್ನು ಅಶೋಕ್ ಕುಮಾರ್ ಕೆಬಿ ಎನ್ನುವವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ‘ಒಂದು ಮಗು ಸಾಕು ಹೇಳುವವರ ಕಣ್ಣು ತೆರೆಸಿದ ಮಗು’ ಎಂದು ಬರೆದುಕೊಂಡಿದ್ದಾ