ಮಣಿಪಾಲ: ಹೆತ್ತವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತಿದ್ದ ಮಗುವಿಗೆ ತಡರಾತ್ರಿ ಅನಾರೋಗ್ಯದಿಂದ ಗಂಭೀರ ಸ್ಥಿತಿ ಎದುರಾಗಿದ್ದು , ತಕ್ಷಣ ಮಗುವನ್ನು ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.
ಅಶೋಕ್ ಅವರೇ ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಮೊದಲು ನೋಡಿಕೊಳ್ಳಿ: ಲಕ್ಷ್ಮಣ ಸವದಿ!
ಕೇರಳ ರಾಜ್ಯದ ಆಲಪ್ಪಿಯ ದಂಪತಿ, ಮಗುವಿನೊಂದಿಗೆ ನೇತ್ರಾವತಿ ಏಕ್ಸಪ್ರೆಸ್ ರೈಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಇಂದ್ರಾಳಿಯ ರೈಲು ನಿಲುಗಡೆ ಬಂದಾಗ ರಾತ್ರಿ 12 ಗಂಟೆ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ ಲಕ್ಷಣಗಳು ಕಂಡುಬಂದವು.
ಈ ಸಂದರ್ಭದಲ್ಲಿ ದಂಪತಿ ಅಸಹಾಯಕರಾಗಿದ್ದರು. ನೆರವಿಗೆ ಬಂದ ನಿಲ್ದಾಣ ನಿಯಂತ್ರಕರು, ಮಗುವಿನ ರಕ್ಷಣೆಗೆ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.ಮಗು ಅಪಾಯದಿಂದ ಪಾರಾಗಿದ್ದಾಗಿ ತಿಳಿದುಬಂದಿದೆ.