ಬೀದರ್:- ನೈತಿಕ ಪೊಲೀಸ್ಗಿರಿ ಕೇಸ್ ಗೆ ಸಂಬಧಪಟ್ಟಂತೆ ಮೂವರು ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಲಾಗಿದೆ.
Gold Price: ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ.. ಇಲ್ಲಿದೆ ಇವತ್ತಿನ ದರಪಟ್ಟಿ!
ಈ ಹಿಂದೆ ಹಿಂದೂ ವ್ಯಕ್ತಿ ಜೊತೆ ಮುಸ್ಲಿಂ ಮಹಿಳೆ ಕುಳಿತಿದ್ದಕ್ಕೆ ಮುಸ್ಲಿಂ ಯುವಕರು ಸೇರಿಕೊಂಡು ಹಿಂದೂ ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಹಲ್ಲೆ ಸಂಬಂಧ ಬಸವಕಲ್ಯಾಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಮುಸ್ಲಿಂ ಸಮುದಾಯದ ಮೂವರು ಯುವಕರನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.
ಇದೇ ಮೇ.10 ರಂದು ಬಸವಕಲ್ಯಾಣದ ಹೊರವಲಯದ ಪಾರ್ಕ್ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಮುಸ್ಲಿಂ ಧರ್ಮೀಯ ಮಹಿಳೆ ಕುಳಿತಿದ್ದರು. ಈ ವೇಳೆ ಅದೇ ಧರ್ಮದ ಕೆಲ ಯುವಕರು ಬಂದು ಹಲ್ಲೆ ಮಾಡಿದ್ದರು. ಈತನ ಜೊತೆಗೆ ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ, ಮುಸ್ಲಿಮರ ಹೆಸರು ಹಾಳು ಮಾಡುತ್ತೀಯಾ ಎಂದು ಕೆಲ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಕುರಿತು ಪ್ರಕರಣ ದಾಖಲಾಗಿದ್ದು, ಇದೀಗ ಮೂವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.