ಶಿವಮೊಗ್ಗ : ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಭದ್ರಾವತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭಾಗಿಯಾಗಿ ಮಾತನಾಡಿದ ಅವರು, ಶಾಸಕರ ಸುಪುತ್ರ ದಕ್ಷ ಮಹಿಳಾ ಅಧಿಕಾರಿ ವಿರುದ್ಧವಾಗಿ ನಿಂದಿಸಿರುವುದು ಎಲ್ಲರೂ ಗೊತ್ತಿದೆ. ಈ ಘಟನೆಯಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಕೈ ಜೋಡಿಸಿ ಮನವಿ ಮಾಡುತ್ತೇನೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಶಾಸಕರ ಪುತ್ರರ ಆಡಿಯೋ ಅಂತಾ ಇಡೀ ಕ್ಷೇತ್ರಕ್ಕೆ ಗೊತ್ತಾಗಿದೆ.. ಪ್ರಭಾವಿ ಸಚಿವೆ ಮೇಲೆ ಮಾತನಾಡಿದ್ದಾರೆ ಎಂದು ಸಿ.ಟಿ.ರವಿ ಯವರನ್ನ ಹೇಗೆ ನಡೆಸಿಕೊಂಡ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ದಕ್ಷ ಮಹಿಳಾ ಅಧಿಕಾರಿ ಮೇಲೆ ಶಾಸಕ ಮಗ ಮಾತನಾಡಿರೋದು ನಾವು ಕೇಳೋಕೆ ಆಗೋಲ್ಲ. ಅಧಿಕಾರಿಯ ಮೇಲೆ ಜೆಸಿಬಿ ಹತ್ತಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಉಸಿರು ಗಟ್ಟುವ ವಾತಾವರಣ ಈ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. ತಂದೆ ಅಧಿಕಾರವನ್ನ ಅವರ ಮಗ ಆಡಳಿತ ನಡೆಸುತ್ತಿದ್ದಾರೆ. ಅವರ ತಂದೆ ಸಂಗಮೇಶ್ ಅವರನ್ನ ಜನ ಆಯ್ಕೆ ಮಾಡಿರೋದು ಅವರ ಮಗನನಲ್ಲ. ನಮ್ಮ ತಂದೆ ಎರಡು ಬಾರಿ ಸಿಎಂ ಆದಾಗ ನಾನು ಒಂದು ಬಾರಿಯೂ ಒಬ್ಬ ಅಧಿಕಾರಿಗೆ ಕರೆ ಮಾಡಿಲ್ಲ, ಮಾತನಾಡಿಸಿಲ್ಲ,, ಕೀಳುಮಟ್ಟದ ರಾಜಕಾರಣಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದರು.