ಬೆಂಗಳೂರು ಗ್ರಾಮಂತರ:– ರಾಷ್ಟ್ರೀಯ ಹೆದ್ದಾರಿ4 ರ ಚಿಕ್ಕಬಿದರಕಲ್ಲು ಗ್ರಾಮದ ಬಳಿ ಬೈಕ್ಗೆ ಕಾರು ಡಿಕ್ಕಿಯಾಗಿ ಕೆಳಗೆ ಬಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಘಟನೆ ಜರುಗಿದೆ.
Cardamom: ನಿತ್ಯ ಏಲಕ್ಕಿ ತಿನ್ನುತ್ತಾ ಬಂದ್ರೆ ದೇಹದಲ್ಲಿ ಆಗುತ್ತೆ ಚಮತ್ಕಾರ!
ಘಟನೆಯಿಂದ 12 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಅಪಘಾತದ ಬಳಿಕ ಕಾರಿನ ಜೊತೆ ಚಾಲಕ ಎಸ್ಕೇಪ್, ಆಗಿದ್ದಾನೆ. ಸಧ್ಯ ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆ್ಯಕ್ಟೀವಾ ಬೈಕ್ನಲ್ಲಿ ತಾಯಿ-ಮಗ ಹೋಗುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿ, ಕೆಳಗೆ ಬಿದ್ದ ಬಾಲಕನ ಮೇಲೆ ಚಾಲಕನ ನಿಯಂತ್ರಣ ಸಿಗದೆ ಟಿಪ್ಪರ್ ಹರಿದಿದೆ. ಬೈಕ್ನ ಬಲಭಾಗಕ್ಕೆ ಬಿದ್ದಿದ್ದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.