ದಾವಣಗೆರೆ:- ಜಿಲ್ಲೆಯ ಹರಿಹರ ತಾಲ್ಲೂಕಿನ ದೀಟೂರು ಬಳಿ ಪೈಪ್ಲೈನ್ ಒಡೆದು ಆಗಸದೆತ್ತರಕ್ಕೆ ನೀರು ಚಿಮ್ಮಿದ ಘಟನೆ ಜರುಗಿದೆ.
ಕೋಟಿ-ಕೋಟಿ ವಂಚಿಸಿದ್ರಾ MS ಧೋನಿ: ಕೂಲ್ ಕ್ಯಾಪ್ಟನ್ ವಿರುದ್ಧ ಇದೆಂಥಾ ಆರೋಪ!
ಇದು ಜಗಳೂರಿನ 57 ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು, ಇಲ್ಲಿನ ಪಂಪ್ ಹೌಸ್ ಬಳಿಯಿಂದ ನೀರು ಸರಬರಾಜು ಆಗುವ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಇನ್ನು ಇದರಿಂದ ಹರಪನಹಳ್ಳಿ ಹರಿಹರ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ತುಂಗಭದ್ರ ನದಿಯಿಂದ ಜಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.
ಇನ್ನೂ ನೀರು ಚಿಮ್ಮುತ್ತಿರುವುದರಿಂದ ಕೆಲವು ಸಮಯ ಸಂಚಾರಕ್ಕೆ ತೊಂದರೆ ಆಗಿದೆ ಎನ್ನಲಾಗಿದೆ.