ನವದೆಹಲಿ:- ಮದುವೆ ಆಗದ ಹುಡುಗರೇ ನಿಮಗೊಂದು ಬಿಗ್ ಆಫರ್ ಕಾದಿದೆ. ಆ ಆಫರ್ ಏನೆಂದು ತಿಳಿಯಲು ಈ ಸ್ಟೋರಿ ಪೂರ್ತಿ ಓದಿ…
ಹೌದು, ಇಲ್ಲೊಬ್ಬ ವ್ಯಕ್ತಿ ತನ್ನ ಮಗಳನ್ನು ಮದುವೆ ಆಗಲು ಮುಂದೆ ಬರುವ ವರನಿಗೆ ಆಫರ್ ಮೇಲೆ ಆಫರ್ ಘೋಷಣೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ. ಅಂಕಿತಾ ಪಾಟೇಲ್ ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಡಾಕ್ಟರ್ ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾನೋ ಆತನಿಗೆ 2 ಕೋಟಿ ಬೆಲೆಯ ಬಂಗಲೆ, ನಮ್ಮ ಕ್ಲಿನಿಕ್ ಮತ್ತು 50 ಲಕ್ಷ ಎಫ್.ಡಿ ಇದೆ ಅದನ್ನು ಆತನ ಹೆಸರಿಗೆ ಬರೆಯುತ್ತೇವೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಆಗಿದ್ದು, ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.
ಶ್ರೀಮಂತ ವರನನ್ನು ಹುಡುಗಿಯ ಮನೆಯವರು ಆಯ್ಕೆ ಮಾಡುವ ಈ ಕಾಲದಲ್ಲಿ ಈತ ತನ್ನ ಮಗಳನ್ನು ಕೈ ಹಿಡುವ ಹುಡುಗ ಹೇಗಿದ್ರೂ ಪರವಾಗಿಲ್ಲ, ಆತ ನನ್ನ ಮಗಳನ್ನು ಮದುವೆಯಾದ್ರೆ ಸಾಕು. ಆತನಿಗೆ 2 ಕೋಟಿಯ ಬಂಗಲೆಯ ಜೊತೆಗೆ 50 ಲಕ್ಷ ಎಫ್.ಡಿ ಕೂಡಾ ನೀಡುತ್ತೇನೆ ಎಂದು ಹೇಳಿದ್ದಾರೆ.