ಚಾಮರಾಜನಗರ: ಲೋಬಿಪಿ ಹಾಗೂ ಹೃದಯಾಘಾತದಿಂದ 3 ನೇ ತರಗತಿಯ 8 ವರ್ಷದ ಬಾಲಕಿ ತೇಜಸ್ಬಿನಿ ಅಂಬ ಪುಟ್ಟ ಬಾಲಕಿ ಅಸ್ವಸ್ಥಗೊಂಡು ಶಾಲಾ ಆವರಣದಲ್ಲಿ ಮೃತಳಾಗಿದ್ದಾಳೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ಲಿಂಗರಾಜು ಹಾಗೂ ಶೃತಿ ದಂಪತಿಯ ಪುಟ್ಟ ಮಗಳು8 ವರ್ಷದ ತೇಜಸ್ವಿನಿ ಶಾಲೆಯ ತರಗತಿಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಚಾಮರಾಜನಗರ ಪಟ್ಟಣದ ಸೆಂಟ್ ಪ್ರಾನ್ಸಿಸ್ ಶಾಲೆಯ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ತೇಜಸ್ವಿನಿ ಎಂದಿನಂತೆ ಸೋಮವಾರ ಬೆಳಗ್ಗೆ ಶಾಲೆಗೆ ಆಗಮಿಸಿ, ಮದ್ಯಾಂತರದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದಾಗ ಇದ್ದಕ್ಕಿದ್ದ ಹಾಗೆ ಗೋಡೆ ಹಿಡಿದುಕೊಂಡು ಕುಸಿತಗೊಂಡಳು.
ಕೂಡಲೇ ಶಾಲೆಯ ಸಿಬ್ಬಂದಿಗಳು ಕುಸಿತಗೊಂಡ ಬಾಲಕಿಯನ್ನು ಸ್ಥಳೀಯ ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಆದರೆ ವಿಧಿಯಾಟವೇ ಬೇರೆಯಾಗಿತ್ತು ಅಸ್ವಸ್ಥಗೊಂಡ ಶಾಲಾ ಬಾಲಕಿ ತೇಜಸ್ವಿನಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ತೇಜಸ್ವಿನಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.