ಹುಬ್ಬಳ್ಳಿ:- ಹಾವು ಕಚ್ಚಿ 3 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲೆಯ ಮುಂಡಗೋಡು ಅಳೂರು ಓಣಿಯಲ್ಲಿ ಜರುಗಿದೆ
ಮಯೂರಿ ಮೃತ ಬಾಲಕಿ. ಸ್ಥಳೀಯ ಮಾರಿಕಾಂಬ ಅಂಗನವಾಡಿಗೆ ಬಾಲಕಿ ತೆರಳಿದ್ದಳು. ಹೊರಬದಿಯ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾಲಿಗೆ ಹಾವು ಕಚ್ಚಿದೆ. ಬಳಿಕ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾರೆ.