ಶಿವಮೊಗ್ಗ:-ಜಿಲ್ಲೆಯ ಶಿಕಾರಿಪುರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನೀರಿನ ಸಂಪ್ಗೆ ಬಿದ್ದು 3 ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಜರುಗಿದೆ.
ಬೆಂಗಳೂರು: ಇಬ್ಬರು ಬೈಕ್ ಕಳ್ಳರು ಅರೆಸ್ಟ್, 11 ದ್ವಿಚಕ್ರ ವಾಹನ ಸೀಜ್!
ಮೃತರನ್ನು ಮೊಹಮ್ಮದ್ ಐಯಾನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೊಹಮ್ಮದ್ ಐಯಾನ್ ಎಂಬ ಮಗು ಆಟವಾಡುತ್ತಿದ್ದ ವೇಳೆ ತುಂಬಿದ್ದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮುಚ್ಚಳ ಮುಚ್ಚದಿದ್ದಕ್ಕೆ ತೊಟ್ಟಿಗೆ ಬಿದ್ದು ಮಗು ಸಾವು ಎಂದು ಆರೋಪ ಮಾಡಲಾಗಿದೆ. ಮಗು ಮೃತಪಟ್ಟ ನಂತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಲ್ಲದೇ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.