ಅರ್ಜೆಂಟೀನಾ: ವೃತ್ತಿಯಲ್ಲಿ ವಕೀಲನಾಗಿರುವ ಅರ್ಜೆಂಟೀನಾದ ಸಾಲ್ಟಾ ನಗರದ 23 ವರ್ಷದ ಯುವಕ ಮೌರಿಸಿಯೊ ಈಗಾಗಲೇ ಮೃತರಾಗಿರುವ ತಮ್ಮ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್ ಅವರ ಪಿಂಚಣಿ ಹಣಕ್ಕಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಮೌರಿಸಿಯೊ ಹೇಳುವ ಪ್ರಕಾರ, ತಾನು ತನ್ನ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್ ಅವರ ಪತಿ ಅದಕ್ಕಾಗಿ ಪಿಂಚಣಿಗೆ ಅರ್ಹನಾಗಿದ್ದೇನೆ ಎಂದು ವಾದ ಮಂಡಿಸಿದ್ದಾರೆ.
2015ರಲ್ಲಿ ಸಂಬಂಧದಲ್ಲಿ ತಮ್ಮ ಹಿರಿಯ ದೊಡ್ಡಮ್ಮನಾಗಿರುವ ಯೋಲಾಂಡಾ ಅವರನ್ನು ವಿವಾಹವಾಗಿದ್ದೇನೆ. 2016ರ ಏಪ್ರಿಲ್ನಲ್ಲಿ ನನ್ನ ಪತ್ನಿಯೂ ಆಗಿದ್ದ ಇವರು ನಿಧನರಾದರು. ಇಂಥ ಸ್ಥಿತಿಯಲ್ಲಿ ಇವರ ಪಿಂಚಣಿ ಹಣಕ್ಕೆ ನಾನು ಅರ್ಹನಾಗಿದ್ದೇನೆ ಎಂದು ಮೌರಿಸಿಯೊ ಹೇಳಿದ್ದಾರೆ. ಆದರೆ, ಸಾಕಷ್ಟು ತನಿಖೆಯ ಬಳಿಕ ಈತನ ಮನೆಯ ನೆರೆಹೊರೆಯವರು ಈ ಮದುವೆಯನ್ನು ನಕಲಿ ಎಂದು ಘೋಷಣೆ ಮಾಡಿದಾಗ ಮೌರಿಸಿಯೊ ಅವರ ಅರ್ಜಿ ತಿರಸ್ಕೃತವಾಗಿದೆ.
ವಾಯುವ್ಯ ಅರ್ಜೆಂಟೀನಾದ ಸಾಲ್ಟಾ ನಗರದ ಮೌರಿಸಿಯೊ, 2009 ರಲ್ಲಿ ಅವರ ಪೋಷಕರು ಬೇರ್ಪಟ್ಟ ನಂತರ ಅವರ ತಾಯಿ, ಸಹೋದರಿ, ಅಜ್ಜಿ ಮತ್ತು ಹಿರಿಯ ದೊಡ್ಡಮ್ಮನೊಂದಿಗೆ ವಾಸಿಸುತ್ತಿದ್ದರು. 2016 ರಲ್ಲಿ ಯೋಲಾಂಡಾ ಅವರ ಮರಣದ ನಂತರ, ಅವರು ತಮ್ಮ ದೊಡ್ಡಮ್ಮನ ಪಿಂಚಣಿಗಾಗಿ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಮಾರಿಸಿಯೊ ಅವರ ಹೇಳಿಕೆಯ ಮೇಲೆ ಅರ್ಜೆಂಟೀನಾ ಸರ್ಕಾತ ತನಿಖೆಯನ್ನು ಪ್ರಾರಂಭಿಸಲಾಯಿತು, ಇದರಲ್ಲಿ ಕುಟುಂಬದವರು ಮತ್ತು ನೆರೆಹೊರೆಯವರು ಭಾಗಿಯಾಗಿದ್ದಾರೆಂದು ತಿಳಿದಿರುವ ಜನರೊಂದಿಗೆ ಅಧಿಕಾರಿಗಳು ಮಾತನಾಡಿದರು. ನೆರೆಹೊರೆಯವರು ಮದುವೆಯ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಹೇಳಿದರು. ಇದರ ಪರಿಣಾಮವಾಗಿ ಮಾರಿಸಿಯೊ ಅವರ ಹಕ್ಕು ತಿರಸ್ಕರಿಸಲ್ಪಟ್ಟಿತು. ಆದರೆ ಈಗ ಇದನ್ನು ಸಾಬೀತುಪಡಿಸಲು ದೇಶದ ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ ಮತ್ತು ಪಿಂಚಣಿಯನ್ನು ಖಂಡಿತವಾಗಿ ಪಡೆಯುತ್ತೇನೆ ಎಂದ ಮೌರಿಸಿಯೊ ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯ ಪತ್ರಿಕೆ ಎಲ್ ಟ್ರಿಬುನೊ ಡಿ ಸಾಲ್ಟಾಗೆ ಮಾತನಾಡಿರುವ ಮೌರಿಸಿಯೊ, ‘ನನ್ನ ಜೀವನಕ್ಕೆ ಯೋಲಾಂಡಾ ದೊಡ್ಡ ಬೆಂಬಲ ನೀಡಿದ್ದರು. ನನ್ನ ಮದುವೆಯಾಗುವುದು ಆಕೆಯ ಕೊನೆಯ ಆಸೆಯಾಗಿತ್ತು. ನಾನು ಯೋಲಾಂಡಾರನ್ನು ನನ್ನ ಹೃದಯದಿಂದ ಪ್ರೀತಿಸಿದೆ. ಅವರ ಸಾವಿನಿಂದ ನನ್ನ ಜೀವನದುದ್ದಕ್ಕೂ ದುಃಖಿಸುತ್ತೇನೆ’ ಎಂದು ಹೇಳಿದ್ದಾರೆ.
ನಾನು ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದಾಗ, ನಾನು ಎಲ್ಲಾ ಅಗತ್ಯ ದಾಖಲೆಗಳನ್ನು ತೋರಿಸಿದ್ದೇನೆ, ಆದರೆ, ಇನ್ನೂ ಪಿಂಚಣಿ ಪಡೆಯುವಲ್ಲಿ ಸಮಸ್ಯೆ ಆಗುತ್ತಿದೆ. ಯೋಲಾಂಡಾ 90 ವರ್ಷಕ್ಕಿಂತ ಮೇಲ್ಪಟ್ಟಿರಬಹುದು ಆದರೆ ಆಕೆ ಹೃದಯದಲ್ಲಿ ಚಿಕ್ಕವಳಾಗಿದ್ದಳು. ನಮ್ಮ ಮದುವೆಯಲ್ಲಿ ಯಾವುದೇ ಕಾನೂನು ಸಮಸ್ಯೆ ಬರಬಾರದು ಎಂದು ಬಯಸಿದ್ದಳು. ನನ್ನ ಕಾನೂನು ಅಧ್ಯಯನಕ್ಕೆ ಹಣ ಪಾವತಿಸಲು ಸಹಾಯ ಮಾಡಲು ಕೇಳಿದಾಗ ನಾನು ಹಾಗೂ ಯೊಲಾಂಡಾ ಮದುವೆಯಾಗಲು ನಿರ್ಧರಿಸಿದೆವು ಎಂದು ಮಾರಿಸಿಯೊ ಹೇಳಿದ್ದರು. ನನ್ನ ಪಾಲಕರು ಬೇರ್ಪಟ್ಟ ಬಳಿಕ, ನಾನು ಅಧ್ಯಯನವನ್ನು ಬಿಡಲು ಬಯಸಿದ್ದೆ ಈ ವೇಳೆ ಯೋಲಾಂಡಾ ಸಹಾಯ ಮಾಡಿದ್ದರು ಎಂದಿದ್ದಾರೆ.