ಬೆಂಗಳೂರು:-ನಮ್ಮ ಮೆಟ್ರೋದಲ್ಲಿ ಪ್ಯಾನಿಕ್ ಬಟನ್ ಒತ್ತಿದ 23 ವರ್ಷದ ಯುವಕನಿಗೆ ಭಾರೀ ದಂಡ ವಿಧಿಸಲಾಗಿದೆ.
ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾರಣ ಇಲ್ಲದೇ 23 ವರ್ಷದ ಯುವಕ ಪ್ಯಾನಿಕ್ ಬಟನ್ ಒತ್ತಿದ್ದಾನೆ. ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Muda Scam: ತೀರ್ಪು ಕಾಯ್ದಿರಿಸಿದ ಕೋರ್ಟ್, ಕ್ಷಣ ಕ್ಷಣಕ್ಕೂ ಸಿದ್ಧುಗೆ ಢವ ಡವ!
ಮೆಟ್ರೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಯುವಕನಿಗೆ ದಂಡ ಹಾಕಲಾಗಿದೆ. ಪ್ಯಾನಿಕ್ ಬಟನ್ ಒತ್ತಿದ ಪರಿಣಾಮ 10 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ ಆಗಿತ್ತು. ಬಳಿಕ ಮೆಟ್ರೋ ಸಂಚಾರ ಆರಂಭ ಆರಂಭಿಸಿತ್ತು ಎನ್ನಲಾಗಿದೆ.