ಕೋಲಾರ:– ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 22 ವರ್ಷದ ಯುವತಿ ದುರ್ಮರಣ ಹೊಂದಿರುವ ಘಟನೆ ನಗರದ ಶ್ರೇಯ ಆಸ್ಪತ್ರೆಯಲ್ಲಿ ಜರುಗಿದ್ದು, ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರಲ್ಲ? ಅದರ ಬಗ್ಗೆ ಸರ್ಕಾರವೇ ಹೇಳಬೇಕು: ಕೋಡಿಶ್ರೀ
22 ವರ್ಷದ ದೀಪ್ತಿ ಮೃತಪಟ್ಟ ಯುವತಿ. ಕಿಡ್ನಿ ಸ್ಟೋನ್ ಕಾರಣ ಬುಧವಾರ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಂತೆ ನಿನ್ನೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಆದರೆ, ಶಸ್ತ್ರಚಿಕಿತ್ಸೆ ಆದ ಕೆಲ ಸಮಯದ ಬಳಿಕ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಇತ್ತ ಮೃತಳ ಪೋಷಕರು ಮಾತ್ರ, ಅನಸ್ತೇಶಿಯಾ ಡೋಸ್ ಹೆಚ್ಚಾಗಿ ಯುವತಿ ಮೃತಪಟ್ಟಿದ್ದಾಳೆಂದು ಆರೋಪಿಸಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.