ತುಮಕೂರು: ಮಗಳ ಸಾವಿನ ನೋವಿನಲ್ಲೂ ಪೋಷಕರು ಸಾರ್ಥಕತೆ ಮರೆದಿದ್ದು, ಮಗಳ ಅಂಗಾಂಗ ದಾನ ಮಾಡಿ ಮಾದರಿ ಆಗಿದ್ದಾರೆ. ತಿಪಟೂರು ನಗರದ ಹಳೇಪಾಳ್ಯದ ನಿವಾಸಿ 12 ವರ್ಷದ ಚಂದನಗೆ ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದಿತ್ತು. ತುಮಕೂರು ಜಿಲ್ಲೆ ತಿಪಟೂರಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ ಚಂದನ ಜು.23ರಂದು ಸ್ಕೂಲ್ ಮುಗಿಸಿ ವಾಪಸ್ ಬರುವಾಗ ತಿಪಟೂರಿನಲ್ಲಿ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಚಂದನ ತೆಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದನ ಸಾವನ್ನಪ್ಪಿದ್ದಾರೆ.
ನಿಮ್ಮ ಕಿಚನ್ ಯಾವಾಗಲೂ ಕ್ಲೀನ್ ಆಗಿರ್ಬೇಕಂದ್ರೆ ಈ ʼʼಅಡುಗೆ ಸೋಡಾʼʼ ಟಿಪ್ಸ್ ಫಾಲೋ ಮಾಡಿ!
ಹೀಗಾಗಿ ಮಗಳ ಸಾವಿನ ನೋವಿನಲ್ಲೂ ಚಂದನಳ ಅಗಾಂಗ ದಾನ ಮಾಡಲು ಪೋಷಕರು ಒಪ್ಪಿದ್ದು, ಮತ್ತೊಬ್ಬರಿಗೆ ಮಾದರಿ ಆಗಿದ್ದಾರೆ. ಪೋಷಕರ ನಿರ್ಧಾರಕ್ಕೆ ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ಚಂದನಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಿಸಲು ತೀರ್ಮಾನಿಸಲಾಗಿದೆ. ಇಂದು ಸಂಜೆ ಚಂದಳ ಅಂತ್ಯಸಂಸ್ಕಾರ ನೆರವೇರಲಿದೆ.