ಕಲಬುರ್ಗಿ:- ಕಾದು ಕೆಂಡದಂತಾಗಿದ್ದ ಕಲಬುರಗಿಯಲ್ಲಿ ಇವತ್ತು ಮಿಂಚು ಗುಡುಗು ಸಮೇತ ರಣ ರಕ್ಕಸ ಮಳೆಯಾಗಿದ್ದು ಸಿಡಿಲಿಗೆ ಓರ್ವ ಬಾಲಕ ಬಲಿಯಾಗಿದ್ದಾನೆ..
ಹೌದು ಕಳೆದ ಕೆಲ ದಿನಗಳಿಂದ ಬಿಸಿಲಿನ ದಗೆಗೆ ಜನ ಬೆಂಡಾಗಿದ್ರು..ದೇವ್ರೆ ಮಳೆಯಾದ್ರೂ ಬರಬಾರದಾ ಅಂತ ಜನ ಬೇಡಿಕೊಂಡಿದ್ರು.. ಆದ್ರೆ ಆಗಿದ್ದೇ ಬೇರೆ ಕಾರಣ ವರುಣ ಆರ್ಭಟಿಸಿದ್ದು ಇಡೀ ಜಿಲ್ಲೆಯ ಹಲವೆಡೆ ಅವಾಂತರಗಳೇ ಸೃಷ್ಠಿಯಾಗಿವೆ.
ರಸ್ತೆಗಳ ತುಂಬೆಲ್ಲ ನೀರು ಹರಿದಾಡಿದ್ದು ನೀದಿನ ರಭಸಕ್ಕೆ ಬೈಕ್ ಗಳು ಕೊಚ್ಚಿಕೊಂಡು ಹೋಗಿವೆ. ದುರಂತ ಅಂದ್ರೆ ಅಳಂದ ತಾಲೂಕಿನ ನರೋಣಾದಲ್ಲಿ ಹೊಲದಲ್ಲಿದ್ದ 10 ವರ್ಷದ ಬಾಲಕ ಮಹೇಶ್ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ..