ನಾನು ಬಂದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಜೊತೆ 10 ಸಭೆ ಮಾಡಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 37 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಕೆಲಸ ನಡೆಯುತ್ತಿವೆ. ಕಾಮಗಾರಿ ವಿಳಂಬ ಆಗಲು ಕೇಂದ್ರ-ರಾಜ್ಯ ಎರಡು ಕಾರಣ.
Bank Deposit: ಯಾವೆಲ್ಲಾ ಬ್ಯಾಂಕುಗಳು ಠೇವಣಿ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತವೆ ಗೊತ್ತಾ..? ಇಲ್ಲಿದೆ ನೋಡಿ
ಭೂಸ್ವಾಧೀನ, ಕೊರೊನಾ ಸೇರಿ ಅನೇಕ ಸಮಸ್ಯೆಯಿಂದ ವಿಳಂಬವಾಗಿದೆ. ನಾನು ಬಂದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಜೊತೆ 10 ಸಭೆ ಮಾಡಿದ್ದೇನೆ. ಮುಂದಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಗೆ ಶಾಸಕರನ್ನು ಆಹ್ವಾನ ಮಾಡ್ತೀವಿ. ಶಾಸಕರೇ ತಮ್ಮ ಸಮಸ್ಯೆ ಹೇಳಲಿ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭ ಮಾಡಲು ರಾಷ್ಟ್ರೀಯ ಪ್ರಾಧಿಕಾರಕ್ಕೆ ಮನವಿ ಮಾಡ್ತೀವಿ ಎಂದರು.