ಸಾಮಾಜಿಕ ಜಾಲತಾಣಗಳಲ್ಲಿ ಪುಡಿ ರೌಡಿಗಳ ಅಟ್ಟಹಾಸ ಜೋರಾಗಿದೆ. ಸೋಶಿಯಲ್ಮೀಡಿಐಆದಲ್ಲಿ ಲಾಂಗ್ ಹಿಡಿದು ಪೋಸ್ ನೀಡೋದು, ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಮಾಡೋದು, ಲಾಂಗ್ ಹಿಡಿದುಕೊಂಡು ಬೈಕ್ನಲ್ಲಿ ವ್ಹೀಲಿಂಗ್ ಮಾಡಿಕೊಂಡು ಹೋಗೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಬೆಂಗಳೂರು ಪೊಲೀಸರರ ಸೈಬರ್ ಸೆಕ್ಯುರಿಟಿ ವಿಂಗ್ ಇಂತ ಸೋಶಿಯಲ್ ಮೀಡಿಯಾ ರೀಲ್ಸ್ಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತದೆ. ಸಾಮಾನ್ಯವಾಗಿ ಮಚ್ಚು, ಲಾಂಗ್, ಪಿಸ್ತೂಲ್ ಹಿಡಿದು ಪೋಸ್ ನೀಡಿದರೆ, ರೀಲ್ಸ್ ಮಾಡಿದರೆ ಅಂಥವರ ವಿರುದ್ಧ ‘Few Days Later’ ಅನ್ನೋ ರೀಲ್ಸ್ ತಾನೂ ಪೋಸ್ಟ್ ಮಾಡಿ ಅವರ ಮೇಲೆ ಕ್ರಮವಾಗಿರುವುದರನ್ನು ತಿಳಿಸುತ್ತದೆ.
ದರ್ಶನ್ ಅವರ ಶೈಲಿಯಲ್ಲೇ ಮಿಂಚುತ್ತಿದ್ದ ರಜತ್ ಈಗ ದಚ್ಚು ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಬಿಗ್ಬಾಸ್ ಮನೆಯಲ್ಲೂ ರಜತ್ ದರ್ಶನ್ ಅವರ ಬಗ್ಗೆ ಮಾತನಾಡಿದ್ದರು. ನಾನು ಡಿಬಾಸ್ ಫ್ಯಾನ್ ಎಂದು ಹೇಳಿಕೊಂಡಿದ್ದ ರಜತ್ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದಾರೆ
ಸಖತ್ ರಗಡ್ ಆಗಿ ಡೈಲಾಗ್ ಹೊಡೆಯುತ್ತಿದ್ದ ರಜತ್ ಅವರನ್ನು ನಟ ದರ್ಶನ್ಗೆ ಕೆಲವರು ಹೋಲಿಸಿದ್ದರು. ಆದ್ರೆ ದರ್ಶನ್ ಅಭಿಮಾನಿಯಾಗಿ ರಜತ್ ಮಾಡಿಕೊಂಡಿರುವ ಎಡವಟ್ಟಿನಿಂದ ಫುಲ್ ಶೇಪ್ಔಟ್ ಕೂಡ ಆಗಿದೆ. ಇದಕ್ಕೆ ಕಾರಣವಾಗಿದ್ದು ರಜತ್ ಮಾಡಿಸಿಕೊಂಡಿರುವ ಫೋಟೋಶೂಟ್. ಹೌದು, ರಜತ್ ಫೋಟೋ ಶೂಟ್ ಕಂಡು ಮೊದಲಿಗೆ ಎಲ್ಲರೂ ವಾವ್ ಎಂದಿದ್ದಾರೆ. ಆದರೆ ಅಲ್ಲಿ ನಡೆದಿರೋ ಒಂದು ಎಡವಟ್ಟಿನಿಂದ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ರಜತ್ ಅವರು ದರ್ಶನ್ ಮೇಲಿನ ಅಭಿಮಾನವನ್ನು ಪ್ರದರ್ಶಿಸಲು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ವಿಶೇಷ ಅಂದ್ರೆ ರಜತ್ ಹಾಕಿರೋ ಪ್ಯಾಂಟ್ ಮೇಲೆಲ್ಲ ದರ್ಶನ್ ಅವರ ಸಿನಿಮಾಗಳ ಹೆಸರುಗಳಿವೆ. ಶರ್ಟ್ ಮೇಲೆ ದೊಡ್ಡದಾಗಿ “D Boss” ಎಂದೂ ಇದೆ. ಕೈಯಲ್ಲಿ ಸ್ಟೈಲಾಗಿ ಲಾಂಗ್ ಹಿಡಿದು ಕರಿಯ ಸಿನಿಮಾದಲ್ಲಿ ದರ್ಶನ್ ಅವರನ್ನೇ ಹೋಲುವಂತೆ ಪೋಸ್ ಕೊಟ್ಟಿದ್ದಾರೆ.
ಆದ್ರೆ ಈ ಫೋಟೋದಲ್ಲಿ ಒಂದು ಎಡವಟ್ಟು ಆಗಿದೆ. ಅದೇನಂದ್ರೆ ರಜತ್ ಹಾಕಿರುವ ಪ್ಯಾಂಟ್ ಮೇಲೆ ಬರೆಯಲಾಗಿದರು “ದರ್ಶನ್” ಎಂಬ ಹೆಸರು ರಜತ್ ಧರಿಸಿದ್ದ ಶೂ ಮೇಲೆ ಬಂದಿದೆ. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ರಜತ್ಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಅಭಿಮಾನ ಮೆಚ್ಚುವಂತದ್ದೇ, ಆದರೆ ಅಭಿಮಾನದ ಹೆಸರಿನಲ್ಲಿ ದರ್ಶನ್ ಅವರಿಗೇ ಅವಮಾನ ಮಾಡ್ತಿದ್ದೀರಲ್ಲ?” ಎಂದು ಪ್ರಶ್ನಿಸಿದ್ದಾರೆ. “ನೀವು ದರ್ಶನ್ ಫ್ಯಾನ್ ಅನ್ನೋದು ನಮಗೂ ಹೆಮ್ಮೆ. ಆದ್ರೆ, ಶೂ ಮೇಲೂ ಅವರ ಹೆಸರು ಬರಬೇಕಿತ್ತಾ?” ಎಂದಿದ್ದಾರೆ. “ಬಹುಶಃ ಇದು ನಿಮ್ಮ ಗಮನಕ್ಕೆ ಬಾರದೆಯೂ ಆಗಿರಬಹುದು. ದಯವಿಟ್ಟು ಇಂತಹ ಹುಚ್ಚಾಟ ತೋರುವಾಗ ದರ್ಶನ್ ಅವರ ಘನತೆಗೆ ಧಕ್ಕೆ ತರದಂತೆ ಎಚ್ಚರ ವಹಿಸಿ ರಜತ್” ಎಂದೂ ಕಿವಿಮಾತು ಹೇಳಿದ್ದಾರೆ. ರಜತ್ ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.