ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳಲ್ಲಿ ಒಂದು ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಹಾಗೂ ಕವಿತಾ ಗೌಡ ದಂಪತಿ. ಸೀರಿಯಲ್ನಲ್ಲಿ ಪತಿ-ಪತ್ನಿ ಆಗಿದ್ದ ಲಚ್ಚಿ-ಚಂದು ರಿಯಲ್ ಲೈಫ್ನಲ್ಲೂ ಒಂದಾಗಿ ನಮ್ಮ ಸಂಸಾರ ಆನಂದ ಸಾಗರ ಅಂತಾ ಸಮಯ ಕಳೆಯುತ್ತಿದ್ದಾರೆ. ಈ ತಾರಾ ದಂಪತಿ ಮುದ್ದಾದ ಮಗುವಿಗೆ ಆರು ತಿಂಗಳು ತುಂಬಿದ್ದು, ಆ ಸಂತಸದ ಕ್ಷಣದಲ್ಲಿ ಚಂದು-ಕವಿತಾ ದಂಪತಿ ಫರ್ಪೆಕ್ಟ್ ಫ್ಯಾಮಿಲಿ ಪಿಚ್ಚರ ಹಂಚಿಕೊಂಡಿದ್ದಾರೆ.
ಚಂದು-ಕವಿತಾ ಸುಖ ಸಂಸಾರಕ್ಕೆ ಸಾಕ್ಷಿ ಎನ್ನುವಂತೆ ಮುದ್ದು ಮಗನ ಆಗಮನವಾಗಿರುವುದು ಕೂಡಾ ಎಲ್ಲರಿಗೂ ತಿಳಿದಿರುವ ವಿಷಯ. ಈ ಜೋಡಿಯ ದಂಪತಿ ಪುತ್ರನಿಗೆ ಭರ್ತಿ ಆರು ತಿಂಗಳು ತುಂಬಿದೆ. ಈ ಸಂಭ್ರಮದಲ್ಲಿ “ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ. ಆರು ತಿಂಗಳ ಹಿಂದೆ ನೀನು ಬಂದೆ. ಇಂದು ನೀನು ಹುಟ್ಟಿದ ಆರು ತಿಂಗಳ ಸಮಯವನ್ನು ನಾವು ಆಚರಿಸುತ್ತಿದ್ದೇವೆ. ನಿನ್ನ ಪಾಲಕರಾಗೋದಕ್ಕೆ ನಾವೆಷ್ಟು ಅದೃಷ್ಟವಂತರು ಎಂದು ನೆನಪಿಸಿಕೊಳ್ಳುವ ಸಮಯವಿದು. ನಮ್ಮ ಬದುಕು ಸದಾ ನಗುವಿನಿಂದ ತುಂಬಿರುವಂತೆ ಮಾಡಿದ ನೀನೇ ನಮಗೆ ಸಿಹಿಯಾದ ಉಡುಗೊರೆ” ಕವಿತಾ-ಚಂದನ್ ವಿಶೇಷ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕವಿತಾ ಗೌಡ ಮತ್ತು ಚಂದನ್ ಇಬ್ಬರೂ ಪರಿಚಯವಾಗಿದ್ದರು. ಲಕ್ಷ್ಮೀಬಾರಮ್ಮ ಸೀರಿಯಲ್ ಮೂಲಕ ಇಂದಿಗೂ ಚಿನ್ನು ಎಂದೇ ಕವಿತಾ ಖ್ಯಾತಿ ಗಳಿಸಿದ್ದರು. ಇಬ್ಬರೂ ಮದುವೆಯಾದ ಬಳಿಕ ಹೊಸ ಹೋಟೆಲ್ ಪ್ರಾರಂಭಿಸಿದರು. ತಮ್ಮದೇ ಆದ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರು. ಚಿತ್ರರಂಗದಿಂದ ದೂರ ಕವಿತಾ ಗೌಡ ದೂರ ಉಳಿದಿದ್ದು, ಸದ್ಯ ಚಂದನ್ ಫ್ಲರ್ಟ್ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದು, ಸ್ವತಃ ಅವರೇ ನಿರ್ದೇಶನ ಮಾಡುತ್ತಿದ್ದಾರೆ.