ಟಾಲಿವುಡ್ ಚಿತ್ರರಂದ ಮೆಗಾಸ್ಟಾರ್ ಚಿರಂಜೀವಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಅವರ ಸಾಧನೆಯನ್ನು ಗುರುತಿಸಿ ಯುಕೆ ಪಾರ್ಲಿಮೆಂಟ್ ಅವರಿಗಿಂದು ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡುತ್ತಿದೆ. ಲಂಡನ್ನಲ್ಲಿ ಇರುವ ಹೌಸ್ ಆಫ್ ಕಾಮನ್ಸ್, ಯುಕೆ ಪಾರ್ಲಿಮೆಂಟ್ನಲ್ಲಿ ಚಿರಂಜೀವಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ನಿನ್ನೆಯೇ ಚಿರಂಜೀವಿ ಯುಕೆಗೆ ಲ್ಯಾಂಡ್ ಆಗಿದ್ದರು. ಹೇಳಿಕೇಳಿ ಚಿರುಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಯುಕೆಗೆ ಅವರು ಆಗಮಿಸುತ್ತಿದ್ದಾರೆಂದು ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಏರ್ ಪೋರ್ಟ್ ಗೆ ಬಂದಿದ್ದರು. ಈ ಸಂದರ್ಭದಲ್ಲಿ ಮೆಗಾಸ್ಟಾರ್ ಮಹಿಳಾ ಅಭಿಮಾನಿ ತನ್ನ ನೆಚ್ಚಿನ ಸ್ಟಾರ್ಸ್ ನೋಡುತ್ತಿದ್ದಂತೆ ಪ್ರೀತಿಯಿಂದ ಕೆನ್ನೆಗೆ ಚುಂಬಿಸಿದ್ದಾರೆ. ಮಹಿಳಾ ಅಭಿಮಾನಿಯ ಪ್ರೀತಿ ಕಂಡು ಚಿರು ಕಣ್ಣಲ್ಲಿ ಸಂತಸ ಮೂಡಿದೆ.
ಚಿರಂಜೀವಿ ಸಿನಿಮಾ ವಿಚಾರಗಳಿಗೆ ಬರುವುದಾದರೆ ‘ವಾಲ್ತೇರು ವೀರಯ್ಯ’ ಹಾಗೂ ‘ಭೋಲಾ ಶಂಕರ್’ ಚಿತ್ರಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಅವರು ‘ವಿಶ್ವಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಯುವಿ ಕ್ರಿಯೇಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪಾತ್ರವರ್ಗದಲ್ಲಿ ಚಿರಂಜೀವಿ ಜೊತೆ ತ್ರಿಷಾ ಕೃಷ್ಣನ್, ಮೀನಾಕ್ಷಿ ಚೌಧರಿ, ಆಶಿಕಾ ರಂಗನಾಥ್ ಮುಂತಾದವರು ನಟಿಸುತ್ತಿದ್ದಾರೆ.