ತ್ರಿಬಲ್ ಆರ್ ಸೂಪರ್ ಸಕಸ್ಸ್ ಬಳಿಕ ಎಸ್.ಎಸ್.ರಾಜಮೌಳಿ ಟಾಲಿವುಡ್ ಸ್ಟೈಲೀಶ್ ಅಂಡ್ ಹ್ಯಾಂಡ್ಸಮ್ ಹಂಕ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಈ ಕ್ರೇಜಿ ಕಾಂಬೋದ ಹೊಸ ಪ್ರಾಜೆಕ್ಟ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಒಡಿಶಾದ ಕೊರಾಪುಟ್ ಬೆಟ್ಟಗುಡ್ಡಗಳ ಬಳಿ SSMB29 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ತಮ್ಮ ನೆಚ್ಚಿನ ನಟರನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ಮುಗಿದಿದ್ದಾರೆ. ಪ್ರಿನ್ಸ್, ಜಕ್ಕಣ್ಣ ಹಾಗೂ ಪ್ರಿಯಾಂಕಾ ಚೋಪ್ರಾ ಜೊತೆ ಫ್ಯಾನ್ಸ್ ಫೋಟೋ ಕ್ಲಿಕ್ಕಿಸಿಕೊಂಡು ಸಂತಪಟ್ಟಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಬಾರಿ ಪ್ಯಾನ್ ಇಂಡಿಯಾ ಬಿಟ್ಟು ಪ್ಯಾನ್ ವರ್ಲ್ಡ್ ಗೆ ಗುರಿ ಇಟ್ಟಿರುವ ಜಕ್ಕಣ್ಣ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡುವಲ್ಲಿ ನಿರತರಾಗಿದ್ದಾರೆ. ಇದೊಂದು ಗ್ಲೋಬಲ್ ಟ್ರಾಟಿಂಗ್ ಅಡ್ವೆಂಚರಸ್ ಚಿತ್ರವಾಗಿದ್ದು, ಬರೋಬ್ಬರಿ 1000 ಕೋಟಿ ರೂ. ಬಜೆಟ್ನಲ್ಲಿ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗುವ ನಿರೀಕ್ಷೆಯಿದೆ. ದಕ್ಷಿಣದ ಸೂಪರ್ಸ್ಟಾರ್ಗಳಾದ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿರುವ ಪ್ರಿನ್ಸ್ ಗೆ ಪೃಥ್ವಿ ಖಳನಾಯಕನಾಗಿ ತೊಡೆ ತಟ್ಟಿದ್ದು, ದೇಸಿ ಗರ್ಲ್ ಪಿಗ್ಗಿ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ.
ವರ್ಷದ ಆರಂಭದಲ್ಲೇ ಚಿತ್ರದ ಮುಹೂರ್ತ ನಡೆಸಲಾಗಿತ್ತು. ಆದರೆ ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಸದ್ದಿಲ್ಲದೇ ರಾಜಮೌಳಿ ಚಿತ್ರೀಕರಣ ಆರಂಭಿಸಿದ್ದರು. ಸದ್ಯ ಚಿತ್ರತಂಡ ಒರಿಸ್ಸಾದಲ್ಲಿ ಬೀಡು ಬಿಟ್ಟಿದೆ. ಅಲ್ಲಿ ಒಂದು ಸನ್ನಿವೇಶದ ಚಿತ್ರೀಕರಣವನ್ನು ಯಾರೋ ಮೊಬೈಲ್ನಲ್ಲಿ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅದನ್ನು ಚಿತ್ರತಂಡ ಡಿಲೀಟ್ ಮಾಡಿಸುವ ಪ್ರಯತ್ನವನ್ನು ಮಾಡಿದೆ. ಇನ್ನು ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ, ಪಿಎಸ್ ವಿನೋದ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.