ಬೆಂಗಳೂರು:- ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ರನ್ಯಾ ರಾವ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಆರೋಪದಡಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ FIR ದಾಖಲಾಗಿದೆ.
ರನ್ಯಾ ರಾವ್ ಪರ ಅಕುಲ ಅನುರಾಧ ಎಂಬವರು ಯತ್ನಾಳ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಯತ್ನಾಳ್ ಅವರು ಅವಾಚ್ಯ ಪದ ಬಳಸಿ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಬಿಎನ್ಎಸ್ ಸೆಕ್ಷನ್ 79 ಅಡಿ ಎಫ್ಐಆರ್ ದಾಖಲಾಗಿದೆ.