ಶಿವಮೊಗ್ಗ: ಹಾವೇರಿ ಜಿಲ್ಲೆಯಲ್ಲಿ ಸ್ವಾತಿ ಎಂಬ ಯುವತಿಯ ಕೊಲೆ ಮಾಡಲಾಯಿತು. ಇಂತಹ ಸಂದರ್ಭಲ್ಲಿಯೂ ರಾಜ್ಯದ ಮುಖ್ಯ ಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ನೀವೇನ್ ಮಾಡುತ್ತಿದ್ರಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪ್ರಶ್ನಿಸಿದರು.
ಇಂದು ನಗರದ ಪತ್ರಿಕಾ ಭನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಲವ್ ಜಿಹಾದ್ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಡುವಳಿಗೆ ಯಾರಿಗೂ ನೆಮ್ಮದಿ ತರುತ್ತಿಲ್ಲ. ಹಾವೇರಿಯಲ್ಲಿ ಸ್ವಾತಿ ಎಂಬ ಯುವತಿಯನ್ನು ನಿರ್ದಯವಾಗ ಕೊಲೆ ಮಾಡಲಾಗಿದೆ. ಈ ಸಂದರ್ಭದಲ್ಲಿಯೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಖಂಡಿಸದೇ ಇರುವುದು ದುರಾದೃಷ್ಟಕರ. ಮಾತೆತ್ತಿದರೆ ನನ್ನನ್ನು ಮುಸಲ್ಮಾನ ವಿರೋಧಿ ಎನ್ನುತ್ತೀರಾ. ರಾಜ್ಯದ ಮುಖ್ಯಮಂತ್ರಿಗಳೇ ಹಾಗೂ ಗೃಹಸಚಿವರೇ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ನೀವೇನು ಮಾಡ್ತಿದ್ರಿ ಎಂದು ಪ್ರಶ್ನಿಸಿದರು.
ಸ್ವಾತಿ ಹತ್ಯೆ ಪ್ರಕರಣ ಮಾಸೂರು ಬಂದ್ ; ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ
ಅಷ್ಟೇ ಅಲ್ಲದೆ ಪೊಲೀಸರು ಸಹ ಆ ಯುವತಿಯ ಶವವನ್ನು ಪರೀಕ್ಷೆಯೂ ಮಾಡದೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಪೊಲೀಸರಿಗೆ ಮನೆಯವರಿಗೂ ವಿಷಯ ತಿಳಿಸದೆ ಅಂತ್ಯ ಸಂಸ್ಕಾರ ಮಾಡುವ ಅರ್ಜೆಂಟೇನಿತ್ತು ಎಂಬುದು ಗೊತ್ತಾಗುತ್ತಿಲ್ಲ. ಇದು ಇಡೀ ಕರ್ನಾಟಕದ ಜನ ತಲೆ ತಗ್ಗಿಸುವ ವಿಚಾರ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.