ವಿಜಯಪುರ : ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ವಿಜಯಪುರ ಜಿಲ್ಲೆ ಉಕ್ಕಲಿ ಗ್ರಾಮದ ಬಳಿಯ ಹೆಗಡಿಹಾಳ ಕ್ರಾಸ್ ಬಳಿ ಸಾವು.
ಏಕಾಏಕಿ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿತ ; ಮನೆಯಲ್ಲಿದ್ದ ನಾಲ್ವರು ಬಚಾವ್
ಮೃತರನ್ನು ಉತ್ನಾಳ ಗ್ರಾಮದ ನಿವಾಸಿಗಳಾದ ಭೀರಪ್ಪ ಗೋಡೆಕರ್ (26), ಹಣಮಂತ ಕಡ್ಲಿಮಟ್ಟಿ (32) ಎಂದು ಗುರುತಿಸಲಾಗಿದೆ. ಸಾವನಪ್ಪಿದ ಮತ್ತೋರ್ವನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಉಮೇಶ (30) ಎಂಬುವನ ಸ್ಥಿತಿ ಗಂಭೀರವಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ದೌಡಾಯಿಸಿರೋ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.