ಬೆಂಗಳೂರು: ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕದ್ದಿರುವ ಘಟನೆ ನಗರದ ಗಾಂಧಿನಗರ ಹೊಟೇಲ್ ಮುಂಭಾಗದ ಬಳಿ ನಡೆದಿದೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಡೆದ ಕಳ್ಳತನನಾಗಿದ್ದು, ಕಳ್ಳರ ಕಂಪ್ಲೀಟ್ ಕರಾಮತ್ತು ಮೊಬೈಲ್ ನಲ್ಲಿ ಸೆರೆಯಾಗಿದೆ.
ನೀವು ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡುತ್ತಿದ್ದೀರಾ..? ರದ್ದತಿ ಶುಲ್ಕ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು..?
ಹೋಟೆಲ್ನಲ್ಲಿದ್ದ ಯಾತ್ರಿಕರು ಕಳ್ಳತನದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದು, ಕಾರಿಗೆ ಜಾಕ್ ಹಾಕಿ ನಾಲ್ಕು ಚಕ್ರಗಳನ್ನ ಬಿಚ್ಚಿ, ಚಕ್ರಗಳಿಗೆ ಸಿಮೆಂಟ್ ಕಲ್ಲುಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಸದ್ಯ ಕಾರು ಮಾಲೀಕ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಚಕ್ರಗಳನ್ನು ಕದ್ದ ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.