ಧಾರವಾಡ : ಜಯ ಕರ್ನಾಟಕ ಧಾರವಾಡ ಶಹರ ಆಟೋ ಘಟಕದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಆಚರಿಸಲಾಯಿತು. ಅಪ್ಪು ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಪಟಾಕಿಯನ್ನು ಸಿಡಿಸಿ ಮತ್ತು ಆಟೋ ಘಟಕದ ವತಿಯಿಂದ ಅನ್ನ ಸಂತರ್ಪಣೆಯನ್ನು ವಿತರಣೆ ಮಾಡಲಾಗಿದೆ.
ಆಟೋ ಘಟಕದ ಪದಾಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯಿಂದ ಆಟೋ ಡೋರ್ ವಿತರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಚಿತ್ರ ಆಸ್ಪತ್ರೆ ಹತ್ತಿರ ಮಾಲಮಡ್ಡಿ ಯಮ್ಮಿಕೇರಿಯೇಲ್ಲಿರುವ ಕರ್ನಾಟಕ ರತ್ನ ಅಪ್ಪು ಆಟೋ ಸ್ಟ್ಯಾಂಡ್ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗಣ್ಯರಿಗೆ ಸನ್ಮಾನವನ್ನು ಮಾಡಲಾಯಿತು. ಈ ವೇಳೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಎಂ ಮುಧೋಳ , ಹು-ಧಾ ಮಹಾನಗರ ಪಾಲಿಕೆ 18ನೇ ವಾರ್ಡಿನ ಸದಸ್ಯರು ವಿಷ್ಣು ಕೊರ್ಲಹಳ್ಳಿ, ಭೀಮಸಿ ನೇಮಿಕಲ್ಲ, ಮೋಹನ ಹುಲ್ಲೂರು ಜಯ ಕರ್ನಾಟಕ ಸಂಘಟನೆ ಆಟೋ ಘಟಕದ ಅಧ್ಯಕ್ಷರಾದ ದುರ್ಗಪ್ಪ ಹುಬ್ಬಳ್ಳಿ ಉಪಸ್ಥಿತರಿದ್ದರು.