ಬೆಳಗಾವಿ : ಬೆಳಗಾವಿ ನಗರದಲ್ಲಿ ಅನೈತಿಕ ಪೊಲೀಸಗಿರಿ ಪ್ರಕರಣ ನಡೆದಿದ್ದು, ಯುವತಿ ಜೊತೆಗೆ ಮಾತನಾಡುತ್ತ ಕುಳಿತಿದ್ದ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಬೆಳಗಾವಿ ತಾಲೂಕಿನ ಸಾವಗಾಂವ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ.
ಅಲ್ಲಾವುದ್ದೀನ್ ಫೀರ್ಜಾದ್ ಎಂಬಾತನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ತಮ್ಮ ಸಮಾಜದ ಯುವತಿ ಜೊತೆಗೆ ಯಾಕೆ ಮಾತನಾಡುತ್ತಿದೀಯಾ ಎಂದು ಯುವಕರ ಗ್ಯಾಂಗ್ ನಿಂದ ಹಲ್ಲೆ ಆರೋಪ ಕೇಳಿಬಂದಿದೆ.
ಜಾತಿನಿಂದನೆ, ಲೈಂಗಿಕ ಕಿರುಕು ; ಸಿರೆಗೆರೆ ಗ್ರಾಮ ಪಂಚಾಯತಿ ಸದಸ್ಯನ ಬಂಧನ
ಹರಿದ ಬಟ್ಟೆಯಲ್ಲಿ ಠಾಣೆಗೆ ಬಂದು ದೂರು ನೀಡಿದ ಅಲ್ಲಾವುದ್ದೀನ್ ದೂರು ದಾಖಲಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ದೂರು ದಾಖಲಿಸಿದ್ದು, ತಡರಾತ್ರಿಯೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಜಾಧವ, ಸುಮಿತ್, ವಿರೇಶ್, ಜಯ ಇಂಚಲ ಬಂಧಿತರಾಗಿದ್ದು, ಪರಾರಿಯಾದ ಇಬ್ಬರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.