ಚಿತ್ರದುರ್ಗ: ಜಿಲ್ಲೆಯ ಸಿರೆಗೆರೆ ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ..
ಮಾದಪ್ಪ ಕಂಕಣ ಭಾಗ್ಯ ಕರುಣಿಸಪ್ಪಾ ; ಮದ್ವೆಯಾಗದ ಗಂಡು ಮಕ್ಕಳ ಪಾದಯಾತ್ರೆ
ಆರೋಪಿ ದೇವರಾಜ್ ಗ್ರಾ.ಪಂ ಅಧ್ಯಕ್ಷೆ ಹಾಗೂ ಪಿಡಿಓಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು, ಜೊತೆಗೆ ಜಾತಿನಿಂದನೆ ಮಾಡುತ್ತಿದ್ದರು ಎಂದು ಪಂಚಾಯತಿಯ ಕ್ಲರ್ಕ್ ಜಯರಾಮ್ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನಾಧಾರ ಆರೋಪಿ ದೇವರಾಜ್ರನ್ನು ಭರಮಸಾಗರ ಪೊಲೀಸರು ಬಂಧಿಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..