ಚಕ್ಕೋತ ಹಣ್ಣು ನೋಡಲು ಎಷ್ಟು ಚೆನ್ನಾಗಿರುತ್ತೋ, ಇದರ ರುಚಿ ಕೂಡ ಅಷ್ಟೇ ಚೆನ್ನಾಗಿರುತ್ತೆ, ಜೊತೆಗೆ ಇದರ ಆರೋಗ್ಯ ಪ್ರಯೋಜನಗಳು ಸಹ ಹಲವಾರಿದೆ. ಇದು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ, ಹಾಗೆಯೇ ಆಲ್ಕೋಹಾಲ್ ಚಟವನ್ನು ದೂರ ಮಾಡುತ್ತೆ. ಇಂದಿನಿಂದ ನಿಮ್ಮ ಆಹಾರದಲ್ಲಿ ಚಕ್ಕೋತವನ್ನು ಸೇರಿಸಿ. ಇದು ಅತ್ಯುತ್ತಮ ಮತ್ತು ಪ್ರಯೋಜನಕಾರಿ ಹಣ್ಣು. ಅದರ ಹುಳಿ ಮತ್ತು ಸಿಹಿ ರುಚಿ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತೆ.
ಚಕ್ಕೋತ ಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಲಾಭಗಳಿವೆ. ಥೇಟ್ ನಿಂಬೆ ಹಣ್ಣಿನಂತೆ ಇರುವ ಈ ಚಕ್ಕೋತಾ ದೇವನಹಳ್ಳಿಯ ಹಿರಿಮೆಯಾಗಿದೆ. ಎರಡೂವರೆ ಶತಮಾನಗಳ ಇತಿಹಾಸ ಇರೋ ಈ ವಿಶಿಷ್ಟ ಹಣ್ಣು ಇಂದಿಗೂ ಸಹ ಬೇಡಿಕೆಯಲ್ಲಿದೆ.
ಚಕ್ಕೋತ ಹಣ್ಣು ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಇರುವುದರಿಂದ ಇದನ್ನು ಸಾಕಷ್ಟು ಮಂದು ತಿನ್ನಲು ಇಷ್ಟ ಪಡುವುದಿಲ್ಲ. ಆದ್ರೆ ಈ ಚಕ್ಕೋತ ಹಣ್ಣು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳನ್ನು ನೀಡುತ್ತದೆ. ಸಿಹಿ ಮತ್ತು ಹುಳಿ ಮಿಶ್ರಿತ ಇರೀ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಗ್ರೇಪ್ ಫ್ರೂಟ್ ಅಥವಾ ಪೊಮೆಲಾ ಎಂದು ಕರೆಯುತ್ತಾರೆ.
ಇದು ನಮ್ಮ ದೇಹಕ್ಕೆ ಅನೇಕ ರೀತಿಯ ಪೋಷಕಾಂಶವನ್ನು ಒದಗಿಸುತ್ತದೆ. ಅಲ್ಲದೇ ಹೃದಯವನ್ನು ಬಲಪಡಿಸುವುದಲ್ಲದೇ, ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಕೂಡ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಅಷ್ಟೇ ಅಲ್ಲದೇ ಕಿಡ್ನಿ ಸ್ಟೋನ್ ಅನ್ನೇ ಕರಗಿಸುವ ಸಾಮರ್ಥ್ಯ ಹೊಂದಿದೆ. ಕಿಡ್ನಿ ಸ್ಟೋನ್ ಇದ್ದವರು ಚಕ್ಕೋತ ಹಣ್ಣನ್ನು ತಿಂದರೆ ಮೂತ್ರ ವಿಸರ್ಜನೆ ಮೂಲಕ ಆಚೆ ಬರುವಂತೆ ಸಹಾಯ ಮಾಡುತ್ತದೆ. ಮತ್ತೆ ಕಿಡ್ನಿ ಸ್ಟೋನ್ ಬಾರದ ಇರೋ ಹಾಗೇ ಮಾಡುತ್ತೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ಶರೀರದಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಹುಮುಖ್ಯವಾಗಿ ಹವಾಲರು ರೀತಿಯ ಕ್ಯಾನ್ಸರ್ ರೋಗ ಬಾರದಂತೆ ತಡೆದು ಹಾಕುತ್ತದೆ. ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬ್ಲಡ್ ಪ್ರೆಶರ್ ಅನ್ನು ಕಂಟ್ರೋಲ್ ಮಾಡುತ್ತದೆ. ಚಕ್ಕೋತ ಹಣ್ಣು ಶರೀರದ ತೂಕವನ್ನು ನಿಯಂತ್ರಿಸುತ್ತದೆ. ಇಷ್ಟೇಲ್ಲಾ ದೇಹಕ್ಕೆ ಪ್ರಯೋಜನ ನೀಡುವ ಹಣ್ಣನ್ನು ತಿಂದು ನೀವು ಆರೋಗ್ಯಕರವಾಗಿ ಇರಿ.