ವಿಜಯಪುರ : ಅನುಮಾಸ್ಪದವಾಗಿ ಯುವಕನ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಠಕ್ಕಳಕಿ ಎಲ್ ಟಿ 1 ನಲ್ಲಿ ನಡೆದಿದೆ.
ಅರವಿಂದ ಸೋಮು ಲಮಾಣಿ (22) ಮೃತದೇಹ ಅನುಮಾನ ರೀತಿಯಲ್ಲಿ ಪತ್ತೆಯಾಗಿದ್ದು, ಕತ್ತಿನ ಮೇಲೆ ತರಚಿದ ಗಾಯಗಳಿವೆ. ಕುತ್ತಿಗೆ ಹಿಸುಕಿ, ಗುಪ್ತಾಂಗಕ್ಕೆ ಹೊಡೆದು ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಅಪರಿಚಿತರಿಂದ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯ ಸತ್ಯಾಂಶ ತಿಳಿದು ಬರಲಿದೆ.
ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದಲ್ಲಿ ಪಾಕ್ ಪರ ಬರಹ ; ಕಿಡಿಗೇಡಿಗಳಿಗಾಗಿ ಹುಡುಕಾಟ
ಇನ್ನೂ ಘಟನಾ ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.