ಹಲ್ಲಿಗಳು ಸಾಮಾನ್ಯವಾಗಿ ಎಲ್ಲರ ಮನೆ ಗೋಡೆಗಳ ಮೇಲೆ ಇರುತ್ತವೆ. ಅನೇಕ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಎಲ್ಲಿ ತಮ್ಮ ಮೇಲೆ ಬೀಳುತ್ತೋ ಅಂತ ಟೆನ್ಶನ್ ಆಗ್ತಾರೆ. ಕೆಲವರು ಮೈ ಮೇಲೆ ಹಲ್ಲಿ ಬೀಳುವುದನ್ನು ಅಶುಭವೆಂದು ಪರಿಗಣಿಸುತ್ತಾರೆ. ಕೆಲವೊಮ್ಮೆ ಹಲ್ಲಿ ನಮ್ಮ ಮೇಲೆ ಬಿದ್ದಾಗ, ಅದು ನಮ್ಮ ಮೇಲೆ ಹರಿದಾಡಿದಾಗ ಅಥವಾ ನಮ್ಮನ್ನು ಮುಟ್ಟಿದಾಗ ಭವಿಷ್ಯದಲ್ಲಿ ಅಪಾಯ ಕಾದಿದೆ ಎಂದು ಹಿರಿಯರು ಹೇಳುತ್ತಾರೆ.
ರಾಜಧಾನಿಯ ಅಸ್ತಿ ತೆರಿಗೆದಾರರಿಗೆ ಬಿಗ್ ಶಾಕ್! ಕೂಡಲೇ ಈ ಕೆಲಸ ಮಾಡಿ, ಇಲ್ದಿದ್ರೆ ಡಬಲ್ Tax ಕಟ್ಟೋಕೆ ರೆಡಿಯಾಗಿ!
ಹಲ್ಲಿಗಳನ್ನು ಮನೆಯಿಂದ ಹೊರಗಿಡಲು ನಾವೆಲ್ಲರೂ ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತೇವೆ. ಆದರೆ ಮನೆಯಲ್ಲಿ ಹಲ್ಲಿ ಇರುವುದು ಭವಿಷ್ಯದ ಕೆಲವು ಘಟನೆಗಳ ಸೂಚನೆಯನ್ನು ನೀಡುತ್ತದೆ ಎನ್ನಲಾಗುತ್ತದೆ. ಹೌದು, ನಾವು ವಾಸ್ತು ಪ್ರಕಾರ ನೋಡುವುದಾರೆ ಹಲ್ಲಿಗಳು ಮನೆಯಲ್ಲಿ ಇರಬೇಕು ಎನ್ನುವ ನಂಬಿಕೆ ಇದೆ. ಇನ್ನು ಹಲ್ಲಿಯ ಮರಿ ಸಹ ಕೆಲವೊಮ್ಮೆ ಕಾಣಿಸುತ್ತದೆ. ಈ ಹಲ್ಲಿ ಮರಿ ಮನೆಯಲ್ಲಿ ಇದ್ದರೆ ಏನಾಗುತ್ತದೆ, ಅದರ ಪರಿಣಾಮಗಳೇನು ಎಂಬುದು ಇಲ್ಲಿದೆ.
ನಿಮ್ಮ ಮನೆಯಲ್ಲಿ ಹಲ್ಲಿ ಮರಿಗಳು ಓಡಾಡುತ್ತಿದ್ದರೆ ಅದು ನಿಮಗೆ ತುಂಬಾ ಶುಭ ಸಂಕೇತ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಇದಲ್ಲದೇ, ಭವಿಷ್ಯದಲ್ಲಿ ಕೆಲವು ದೊಡ್ಡ ಘಟನೆಗಳನ್ನು ಸಹ ಇದು ಸೂಚಿಸುತ್ತದೆ ಎನ್ನಲಾಗುತ್ತದೆ. ಇನ್ನು ನೀವು ಎರಡು ಹಲ್ಲಿ ಮರಿಗಳನ್ನು ಒಟ್ಟಿಗೆ ಅನೇಕ ಬಾರಿ ನೋಡಿದರೆ ಅದು ಬಹಳ ಒಳ್ಳೆಯದು ಎನ್ನಲಾಗುತ್ತದೆ. ಇದು ಹಲ್ಲಿಮರಿಗಳ ಹೊಂದಾಣಿಕೆಯನ್ನು ತೋರಿಸುತ್ತದೆ
ನೀವೂ ಹಲ್ಲಿ ಮರಿಗಳನ್ನ ಒಟ್ಟಿಗೆ ಕಂಡರೆ ಅದು ಶುಭ ಸಂಕೇತವನ್ನು ನೀಡುತ್ತದೆ. ಗಂಡು ಮತ್ತು ಹೆಣ್ಣು ಹಲ್ಲಿಗಳ ನಡುವಿನ ಸಾಮರಸ್ಯವು ಮನೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಉತ್ತಮ ಸಾಮರಸ್ಯವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನೆಗೆ ಹಳೆಯ ಸ್ನೇಹಿತನ ಆಗಮನವನ್ನು ಸಹ ಇದು ಸೂಚಿಸುತ್ತದೆ. ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಂಡರೆ ಅದು ತುಂಬಾ ಶುಭ ಫಲಗಳು ಸಿಗುತ್ತದೆ ಎನ್ನಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ಹಲ್ಲಿಯು ಲಕ್ಷ್ಮಿ ದೇವಿಯನ್ನು ಸೂಚಿಸುತ್ತದೆ ಮತ್ತು ದೀಪಾವಳಿಯ ದಿನದಂದು ಮನೆಗೆ ಹಲ್ಲಿಯ ಆಗಮನ ಅಥವಾ ದರ್ಶನವು ಮನೆಗೆ ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುತ್ತದೆ . ಇದರಿಂದ ನಿಮಗೆ ಆರ್ಥಿಕವಾಗಿ ಬಹಳ ಲಾಭವನ್ನ ನೀಡುತ್ತದೆ. ಈ ಸಮಯದಲ್ಲಿ ನೀವು ಅನಿರೀಕ್ಷಿತವಾಗಿ ಧನಲಾಭವನ್ನ ನೀಡುತ್ತದೆ. ನಿಮ್ಮ ಕಷ್ಟಗಳಿಗೆ ಸಹ ಈ ಸಮಯದಲ್ಲಿ ಪರಿಹಾರ ಸಿಗುತ್ತದೆ.
ನಿಮ್ಮ ಮನೆಯಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದರೆ ಆಗ ಹಲ್ಲಿ ಕಂಡರೆ ಕಿರಿಕಿರಿ ಆಗುತ್ತದೆ. ಆದರೆ ವಿಶೇಷ ದಿನದಂದು ಮನೆಯಲ್ಲಿ ಹಲ್ಲಿ ಕಂಡರೆ ಅಪ್ಪಿ ತಪ್ಪಿಯೂ ಹೊರಗೆ ಎಸೆಯಬೇಡಿ. ಹಲ್ಲಿ ಮರಿ ಮನೆಗೆ ಬಂದರೆ ಮುಂಬರುವ ವರ್ಷದಲ್ಲಿ ನಿಮಗೆ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಅಷ್ಟೇ ಅಲ್ಲದೇ ಮನೆಯಲ್ಲಿ ಸುಖ, ಸಮೃದ್ಧಿ ಇರುತ್ತದೆ.
ನಿಮ್ಮ ಮನೆಯಲ್ಲಿ ಹಲ್ಲಿ ಮರಿಗಳು ಓಡಾಡುತ್ತಿದ್ದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಇದು ನಿಂತು ಹೋಗಿದ್ದ ನಿಮ್ಮ ಕೆಲಸಗಳನ್ನ ಮತ್ತೆ ಆರಂಭಿಸಿ ಅದರಿಂದ ಯಶಸ್ಸು ಪಡೆಯಲು ಸಹಾಯ ಮಾಡುತ್ತದೆ. ಇದು ಅತ್ಯಂತ ಮಂಗಳಕರ ಫಲಗಳನ್ನ ನೀಡುತ್ತದೆ. ಜೊತೆಗೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ ಎಂಬುದರ ಸಂಕೇತ ಇದಾಗಿದೆ.
ಮನೆಯಲ್ಲಿ ಹಲ್ಲಿ ಮರಿಗಳನ್ನು ಕಂಡರೆ ಓಡಿಸಲು ಅಥವಾ ಸಾಯಿಸಲು ಪ್ರಯತ್ನ ಮಾಡಬೇಡಿ. ಇದನ್ನ ಸಾಯಿಸಿದರೆ ನಿಮಗೆ ಕೆಟ್ಟ ಫಲಗಳು ಸಿಗುತ್ತದೆ. ಆದರೆ ಆಕಸ್ಮಿಕವಾಗಿ ಹಲ್ಲಿ ಮರಿ ಸತ್ತರೆ ಅದನ್ನ ನೀವು ನೆಲದ ಮೇಲೆ ಹೂಳಬೇಕು ಎನ್ನುತ್ತಾರೆ. ಇದರಿಂದ ಯಾವುದೇ ದೋಷಗಳು ಸಹ ಕಾಡುವುದಿಲ್ಲ.