ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಅಸ್ತಿ ತೆರಿಗೆದಾರರಿಗೆ ಬಿಬಿಎಂಪಿ ಬಿಗ್ ಶಾಕ್ ಕೊಟ್ಟಿದೆ. ಬಿಬಿಎಂಪಿಯಿಂದ ಬಾಕಿ ಅಸ್ತಿ ತೆರಿಗೆ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶಾಕ್ ಕೊಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಬೇಕು. ಇಲ್ಲವಾದ್ರೆ ಬಿಳುತ್ತೆ ಡಬಲ್ ಡಬಲ್ ತೆರಿಗೆ ಕಟ್ಟೋಕೆ ರೆಡಿ ಆಗಿ ಎಂದು ಬಿಬಿಎಂಪಿ ಹೇಳುತ್ತಿದೆ.
ಅಂಬಿ ಮೊಮ್ಮಗನ ಹೆಸರೇನು ಗೊತ್ತಾ!? ಮಗನಲ್ಲೇ ಅಪ್ಪನನ್ನು ಕಂಡ ಅಭಿಷೇಕ್! ರೆಬೆಲ್ ಫ್ಯಾನ್ಸ್ ಖುಷ್!
ಕಳೆದ ವರ್ಷಅಸ್ತಿ ತೆರಿಗೆ ಬಾಕಿ ಕಟ್ಟೋದಕ್ಕೆ ಅಂತ ಓಟಿಎಸ್ ಜಾರಿ ಮಾಡಲಾಗಿತ್ತು. ಓಟಿಎಸ್ ಮೂಲಕ ಬಾಕಿ ತೆರಿಗೆ ಕಟ್ಟಿದ್ರೆ ದಂಡ ಹಾಗೂ ಬಡ್ಡಿ ಮನ್ನಾ ಎಂದಿತ್ತು. ಅದಾಗಿಯೂ ಕಟ್ಟಡ ಮಾಲೀಕರು ಅಸ್ತಿ ತೆರಿಗೆ ಬಾಕಿ ಕಟ್ಟೋದಕ್ಕೆ ನಕಾರ ಎತ್ತಿದ್ದಾರೆ. ಇದೀಗ ಮಾರ್ಚ್ 31ರ ಒಳಗೆ ಬಾಕಿ ಅಸ್ತಿ ತೆರಿಗೆ ಕಟ್ಟದಿದ್ರೆ ಭಾರೀ ದಂಡ ತೆರಬೇಕಾಗುತ್ತದೆ. ಉಳಿಸಿಕೊಂಡಿರೋ ತೆರಿಗೆ ಮೊತ್ತ ಡಬಲ್ ಕಟ್ಟುವಂತೆ ಆದೇಶ ಹೊರಡಿಸಲಾಗಿದೆ. ಏಪ್ರಿಲ್ ಒಂದರಿಂದ ಬಾಕಿ ಅಸ್ತಿ ತೆರಿಗೆ ಉಳಿಸಿಕೊಂಡರು ಡಬಲ್ ಕಟ್ಟಲೇಬೇಕು. ಬಿಬಿಎಂಪಿ 2020ರ ಆಕ್ಟ್ ನಲ್ಲಿ ಪಾಲಿಕೆ ಕಾಯ್ದೆ ತಂದಿದ್ದು ಈಗಾಗಲೇ ಈ ಕಾಯ್ದೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಅದೇಶ ಹೊರ ಬಿದ್ದಿದೆ.
ಯಾವ ರೀತಿ ತೆರಿಗೆ ಡಬಲ್ ಆಗತ್ತೆ!?
ಆಗಾದ್ರೆ ತೆರಿಗೆ ಯಾವ ರೀತಿಯಲ್ಲಿ ಡಬಲ್ ಅಗುತ್ತೆ ಅಂತ ನೋಡೋದಾದ್ರೆ, ನಿಮ್ಮ ಬಾಕಿ ಅಸ್ತಿ ತೆರಿಗೆ 1 ಸಾವಿರ ಇದ್ದರೆ 1ಸಾವಿರ ದಂಡ ಸಮೇತ ಎರಡು ಸಾವಿರ ಅಗುತ್ತೆ. ಜೊತೆಗೆ ಶೇಕಡಾ 9 ರಷ್ಟು ಬಡ್ಡಿ ಕಟ್ಟಬೇಕು. ಒಟ್ಟು.. 2180 ರೂ ಕಟ್ಟಬೇಕಾದ ಅನಿವಾರ್ಯ ಸೃಷ್ಟಿ ಆಗತ್ತೆ. ಈಗಾಗಲೇ ಖಾತಾ ಹೊಂದಿದ ಹಾಗೂ ಖಾತಾ ಇಲ್ಲದ ಎಲ್ಲಾ ಕಟ್ಟಡಗಳಿಗೂ ಈ ತೆರಿಗೆ ಅನ್ವಯಿಸಲಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 1ಲಕ್ಷದ 82 ಸಾವಿರ ಕಟ್ಟಡ ಮಾಲೀಕರು ಆಸ್ತಿ ತೆರಿಗೆ ಬಾಕಿ ಇದ್ದು, ಮಹಾದೇವಪುರ. ಪೂರ್ವ ವಲಯಗಳಲ್ಲಿ ಅತಿ ಹೆಚ್ಚು ಅಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ.
ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಹೊರ ಬಿದ್ದಿದೆ.