ಬೀದರ್ : ಜಿಲ್ಲೆಯ ಔರಾದ್ ತಾಲೂಕಿನ ದೇಶಮುಖ್ ವಡಗಾಂವ್ ಗ್ರಾಮದಲ್ಲಿ ಪಾಳೆಗಾರಿಕೆ ವಿರುದ್ದದ ವಿಜಯೋತ್ಸವದ ಸಂಕೇತವಾಗಿ ರಣಗಂಬ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಅದ್ದೂರಿಯಾಗಿ ಆಚರಿಸಲಾಯಿತು.
ಸುಮಾರು ವರ್ಷಗಳಿಂದ ಹೋಳಿ ಹಬ್ಬದ ಎರಡನೇ ದಿನಕ್ಕೆ ಆಚರಿಸಲಾಗುವ ಈ ರಣಗಂಬ ಉತ್ಸವಕ್ಕೆ ಗಡಿಭಾಗದ ತೆಲಂಗಾಣ, ಮಹಾರಾಷ್ಟ್ರದದಿಂದಲೂ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದರು. ರಣಗಂಬಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಹೋಳಿ ದಿನದಂದು 100 ಅಡಿ ಉದ್ದದ ರಣಗಂಬವನ್ನು ಕೆರೆಯಿಂದ ಗ್ರಾಮಕ್ಕೆ ತಂದು ಮಡಿಬಟ್ಟೆಗಳನ್ನ ಸುತ್ತಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಹೋಳಿ ಹಬ್ಬದ ಮಾರನೆ ದಿನ ರಣಗಂಬವನ್ನ ಗ್ರಾಮದ ದೇಶಮುಖ ಮನೆತನದ ಗಡಿ ಆವರಣದಲ್ಲಿ ರಣಗಂಬವನ್ನ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿಷ್ಠಾಪನೆ ಬಳಿಕ ಬರುವ ಯುಗಾದಿ ಹಬ್ಬದಂದು ರಣಗಂಬವನ್ನ ಕೆರೆಯಲ್ಲಿ ಬಿಟ್ಡು ಬರುವ ವಾಡಿಕೆ ಇದೆ