ಆನೇಕಲ್ : ಹೋಳಿ ಹಬ್ಬದ ಆಚರಣೆ ವೇಳೆ ಮಾರಾಮಾರಿ ನಡೆದಿದ್ದು, ತ್ರಿಬಲ್ ಮರ್ಡರ್ನಲ್ಲಿ ಗಲಾಟೆ ಅಂತ್ಯಕಂಡಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದ ಅಬ್ಬಯ್ಯ ಸರ್ಕಲ್ ಬಳಿ ಘಟನೆ ನಡೆದಿದೆ.
ಟಿವಿಎಸ್ ಕನ್ವೆನ್ಷನ್ ಹಾಲ್ ಬಳಿ ವಾಸವಿದ್ದ ಬಿಹಾರ ಮೂಲದ ಕಾರ್ಮಿಕರು, ಕುಡಿದ ನಶೆಯಲ್ಲಿ ಜಗಳವಾಡಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸರ್ಜಾಪುರದ ಪೋರ್ ವಾಲ್ ಅವೆನ್ಯೂ ಅಪಾರ್ಟ್ ಮೆಂಟ್ ಪ್ಯಾಸೇಜ್ ನಲ್ಲಿ ಒಂದು ಶವ, ಅಪಾರ್ಟ್ಮೆಂಟ್ ನ ಕೊಠಡಿಯಲ್ಲಿ ಒಂದು ಶವ ಪತ್ತೆ ಯಾಗಿದ್ದರೆ, ಮತ್ತೊಂದು ಶವ ಅಪಾರ್ಟ್ಮೆಂಟ್ ಹೊರ ಭಾಗದಲ್ಲಿ ಪತ್ತೆಯಾಗಿದೆ.
ಮನೆಗೆ ನುಗ್ಗಿ ಮಹಿಳೆ ಹತ್ಯೆ ಮತ್ತು ದರೋಡೆ ಪ್ರಕರಣ ; ಅರೋಪಿತರಿಗೆ ಜೀವಾವಧಿ ಶಿಕ್ಷೆ
ಬಿಹಾರ ಮೂಲದ ಅನ್ಸು(22) ರಾಧೆ ಶ್ಯಾಮ್(23) ಮೃತರಾಗಿದ್ದು, ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಮೃತರೆಲ್ಲರೂ ಕೂಡ ಬಿಹಾರದ ಒಂದೇ ಗ್ರಾಮದವರಾಗಿದ್ದರು. ಹೋಳಿ ಹಬ್ಬದ ಹಿನ್ನೆಲೆ ಎಲ್ಲ ಒಟ್ಟಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದು ಪರಸ್ಪರ ಹೊಡೆದಾಡಿದ್ದು, ಕೈಗೆ ಸಿಕ್ಕ ದೊಣ್ಣೆ, ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಳಿಕ ಇಬ್ಬರು ಪರಾರಿಯಾಗಿದ್ದಾರೆ.
ಇನ್ನೂ ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರು, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ , ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.