ಬೀದರ್ : ಬೀದರ್ನ ಚನ್ನಬಸವ ಪಟ್ಟದ್ದೇವರು ರಂಗಂಮದಿರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಜನಪದ ಕ್ಷೇತ್ರದ 69 ಸಾಧಕರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ, ತಜ್ಙ ಪ್ರಶಸ್ತಿ ನೀಡಿ ಗೌರವಸಿತು. ಜನಪದ ಕ್ಷೇತ್ರದಲ್ಲಿ ಸಾಧನೆಗೈದ 60 ಸಾಧಕರು ಹಾಗೂ 9 ಜನರಿಗೆ ಪುಸ್ತಕ ಪ್ರದಾನ ಮಾಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಓ ಗಿರೀಶ ಬದೋಲೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯಾದ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಒಣಕೆ ಹಿಡಿದು ಕುಟ್ಟುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತಾನಾಡಿ, ಬಸವಣ್ಣನ ಕರ್ಮಭೂಮಿಯಲ್ಲಿ ಕಾರ್ಯಕ್ರಮ ಮಾಡಿರೋದು ಸಂತಸ ತಂದಿದೆ. ಜನಪದ ಸೊಗಡನ್ನ ಇನ್ಮಷ್ಟು ಬೆಳೆಸುವ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದರು.
ಬಳಿಕ ಜಾನಪದ ಅಕಾಡೆಮಿಯ ಸದಸ್ಯ ಸಂಚಾಲಕ ವಿಜಯಕುಮಾರ್ ಸೋನಾರೆ ಅವರು ಮಾತನಾಡಿ, ನಮ್ಮ ಕಲಾವಿದರು ಜನಪದ ತಾಯಿಯ ಹೊಟ್ಟೆಯಿಂದ ಬಂದಂತವರು. ನಾವು ಸರ್ಕಾರದಿಂದ ಮಾಶಾಸನ ಪಡೆಯಲು ಹೋದಾಗ ಅಲ್ಲಿ 15 ವರ್ಷದ ದಾಖಲಾತಿಗಳನ್ನ ಕೇಳ್ತಾರೆ. ಅಷ್ಟೆಲ್ಲ ದಾಖಲೆಗಳನ್ನು ನೀಡಿದರೂ ಸರ್ಕಾರ ಕೊಡುವುದು ಕೇವಲ ಮೂರು ಸಾವಿರ ಮಾತ್ರ. ಇಂದಿನ ಈ ದುಬಾರಿ ದುನಿಯಾದಲ್ಲಿ ಆ ಮೂರು ಸಾವಿರ ಸಾಕಾಗುವುದಿಲ್ಲ ಆದ್ದರಿಂದ ಅಕಾಡೆಮಿಯ ಅಧ್ಯಕ್ಷರು ಮಾಶಾಸನವನ್ನು ಐದು ಸಾವಿರಕ್ಕೆ ಏರಿಸಬೇಕು ಎಂದು ಮನವಿ ಮಾಡಿದ್ರು…..