ಟಿ20 ಮಾದರಿಗೆ ಮರಳುವ ಬಗ್ಗೆ ಟೀಮ್ ಇಂಡಿಯಾದ ಆಟಗಾರ ಕಿಂಗ್ ಕೊಹ್ಲಿ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಶೇ. 4% ಮೀಸಲಾತಿ ಮುಸ್ಲಿಮರಿಗೆ ಮಾತ್ರವಲ್ಲ: ಡಿ.ಕೆ ಶಿವಕುಮಾರ್ ಸ್ಪೋಟಕ ಹೇಳಿಕೆ!
ಕಳೆದ ವರ್ಷ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಭಾರತದ ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 76 ರನ್ಗಳ ಪ್ರಮುಖ ಪಾತ್ರವಹಿಸಿದ್ದವು. ಆದಾಗ್ಯೂ ತಂಡವನ್ನು ಚಾಂಪಿಯನ್ ಮಾಡಿದ್ದ ಬಳಿಕ ಆಘಾತಕ್ಕಾರಿ ಹೇಳಿಕೆ ನೀಡಿದ್ದ ವಿರಾಟ್ ಕೊಹ್ಲಿ, ಈ ಮಾದರಿಯಲ್ಲೇ ಇದೇ ನನ್ನ ಕೊನೆಯ ಪಂದ್ಯವಾಗಿತ್ತು ಎಂದಿದ್ದರು. ಅಂದರೆ ನಾನು ಟಿ20 ಮಾದರಿಗೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದಾಗ್ಯೂ ಕೊಹ್ಲಿಯ ಈ ನಿರ್ಧಾರವನ್ನು ಕೆಲವರು ಸ್ವಾಗತಿಸಿದ್ದರೆ, ಇನ್ನು ಕೆಲವರು, 2027 ರ ಒಲಿಂಪಿಕ್ಸ್ ನಡೆಯುವವರೆಗಾದರೂ ಕೊಹ್ಲಿ ಟಿ20 ತಂಡದಲ್ಲಿರಬೇಕಿತ್ತು ಎಂದಿದ್ದರು. ಇದೀಗ ಅದೇ ಟಿ20 ಮಾದರಿಗೆ ಮರಳುವ ಬಗ್ಗೆ ಕೊಹ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಾನು ಒಲಿಂಪಿಕ್ಸ್ನಲ್ಲಿ ಆಡುವ ಸಲುವಾಗಿ ಟಿ20 ನಿವೃತ್ತಿ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿದರು. ಆದಾಗ್ಯೂ ಈ ಸಮಯದಲ್ಲಿ ತಮಾಷೆಯ ಉತ್ತರ ನೀಡಿದ ಕೊಹ್ಲಿ, ‘ಒಂದು ವೇಳೆ ಟೀಂ ಇಂಡಿಯಾ ಫೈನಲ್ ತಲುಪಿದರೆ, ನಾವು ಚಿನ್ನದ ಪದಕಕ್ಕಾಗಿ ಪಂದ್ಯವನ್ನು ಆಡುತ್ತಿದ್ದರೆ, ನಾನು ಆ ಒಂದು ಪಂದ್ಯದಲ್ಲಿ ಮತ್ತೆ ತಂಡದ ಪರವಾಗಿ ಆಡಿ, ಪದಕ ತೆಗೆದುಕೊಂಡು ಮನೆಗೆ ಹಿಂತಿರುಗುತ್ತೇನೆ. ಒಲಿಂಪಿಕ್ ಪದಕ ಗೆದ್ದರೆ ತುಂಬಾ ಸಂತೋಷವಾಗುತ್ತದೆ ಎಂದಿದ್ದಾರೆ.