ವಿಜಯನಗರ:- ಆಕಸ್ಮಿಕವಾಗಿ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಡಗಲಿ ಪಟ್ಟಣದ ಮಟನ್ ಮಾರುಕಟ್ಟೆ ಬಳಿ ಜರುಗಿದೆ.
ಬೆಂಕಿಯು, ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಬಳಿಕ ಕೆಲವೇ ನಿಮಿಷದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ. ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಹಾಗೂ ಟಯರ್ಗಳನ್ನು ಪುಡಿಮಾಡುವ ಕಾರ್ಖಾನೆಗೆ ಆವರಿಸಿ ಬೆಂಕಿ ಹೊತ್ತಿ ಕೊಂಡಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ಹೇಳಾಗುತ್ತಿದೆ. ಕಾರ್ಖಾನೆಯ ಒಳಗಿದ್ದ ಕಾರ್ಮಿಕರನ್ನ ಅಗ್ನಿಶಾಮ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಸ್ಥಳಕ್ಕೆ ಹಡಗಲಿ CPI ದೀಪಕ್ ಭೂಸರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯನಗರ ಜಿಲ್ಲೆಯ ಹಡಗಲಿ ಪಟ್ಟಣದ ಮಟನ್ ಮಾರುಕಟ್ಟೆ ಬಳಿ ಘಟನೆ ಜರುಗಿದೆ.