ಬೆಂಗಳೂರು:- ಕಳೆದೊಂದು ವಾರದಿಂದ ಮಾಣಿಕ್ಯ ನಟ ರನ್ಯಾ ರಾವ್ ಗಳ ಗೋಲ್ಡ್ ಸ್ಮಗ್ಲಿಂಗ್ ದೇ ಸುದ್ದಿ. ವಿವಿಐಪಿ ಪ್ರೋಟೋಕಾಲ್ ಮೂಲಕ ದುಬೈನಿಂದ ಬೆಂಗಳೂರಿಗೆ ಚಿನ್ನ ಸ್ಮಗ್ಲಿಂಗ್ ಮಾಡೋವಾಗ ರೆಡ್ ಹ್ಯಾಂಡ್ ಆಗಿ ತಗ್ಲಾಕೊಂಡ ನಟಿ ರನ್ಯಾರಾವ್ ಹಿಂದೆ ಚಿನ್ನದ ವ್ಯಾಪಾರಿಗಳು ಇದ್ದಾರೆ ಅನ್ನೋ ಗುಮಾನಿ ವ್ಯಕ್ತವಾಗಿತ್ತು. ಇದರ ಜಾಡು ಹಿಡಿದು ಹೊರಟ ಇಡಿಗೆ ಸಿಕ್ಕಿದ್ದು ವೈಟ್ ಗೋಲ್ಡ್ ಕಂಪನಿ ನಂಟು..
ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನದ ಬ್ಯುಸ್ ನೆಸ್ ನಿಂದ ಸುದ್ದಿಯಲ್ಲಿರೋ ವೈಟ್ ಗೋಲ್ಡ್ ಕಂಪನಿ ದುಬೈನಿಂದ ಅಕ್ರಮವಾಗಿ ಬೆಂಗಳೂರಿಗೆ ಚಿನ್ನ ಸಾಗಣೆ ಮಾಡ್ತಿದೆಯಾ ? ಇದಕ್ಕೆ ನಟಿಯರು, ಸೆಲಬ್ರಿಟಿಗಳನ್ನು ದಾಳವಾಗಿ ಬಳಸಿಕೊಳ್ತಿದೆಯಾ ಅನ್ನೋದಕ್ಕೆ ರನ್ಯಾ ಗೋಲ್ಡ್ ಕಹಾನಿ ಬೊಟ್ಟು ಮಾಡಿ ಹೇಳ್ತಿದೆ..
ರನ್ಯಾ ರಾವ್ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಗಳ ಮುಂದೆ, ವೈಟ್ ಗೋಲ್ಡ್ ಗಾಗಿ ದುಬೈನಿಂದ ಅಕ್ರಮವಾಗಿ ಕೆಜಿಗಟ್ಟಲೇ ಚಿನ್ನ ಸಾಗಣೆ ಮಾಡಿರೋದಾಗಿ ರನ್ಯಾ ರಾವ್ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.
ರನ್ಯಾ ರಾವ್ ಹೇಳಿಕೆ ದಾಖಲಿಸಿಕೊಂಡ ಇಡಿ ಅಧಿಕಾರಿಗಳು, ಬೆಂಗಳೂರಿನ ಕೋರಮಂಗಲದಲ್ಲಿರುವ ವೈಟ್ ಗೋಲ್ಡ್ ಮಾಲೀಕನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಕೋರಮಂಗಲದಲ್ಲಿರುವ ವೈಟ್ ಗೋಲ್ಡ್ ಕಂಪನಿ ಮಾಲೀಕ ಟಿ.ಜೆ ರಾವ್ ಮನೆ ಮೇಲೆ ರೇಡ್ ಮಾಡಿದ ಇಡಿ ಅಧಿಕಾರಿಗಳೇ ಶಾಕ್ ಅಗಿದ್ತು. ಯಾಕಂದ್ರೆ ವೈಟ್ ಗೋಲ್ಡ್ ಕಂಪನಿ ಮಾಲೀಕ ಟಿ.ಜೆ ರಾವ್ ಮನೆ ಬಂಗಾರದ ಖಜಾನೆಯಂತಿತ್ತು. ಟಿ.ಜೆ ರಾವ್ ಮನೆಯಲ್ಲಿ ರಾಶಿ ರಾಶಿ ಚಿನ್ನ ಕಂಡು ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಎನ್ನಲಾಗಿದೆ. ದುಬೈನಲ್ಲಿ ಚಿನ್ನದ ವ್ಯಾಪಾರಿಯಾಗಿರೋ ಟಿ.ಜೆ ರಾವ್, ಬೆಂಗಳೂರು ಸೇರಿದಂತೆ ದೇಶದ ಹಲವಡೆಯೂ ಗೋಲ್ಡ್ ಬ್ಯುಸ್ ನೆಸ್ ಮಾಡ್ತಿದ್ದಾರೆ.
3 ಇನ್ನೂ ಪ್ರಕರಣ ತನಿಖೆ ಕೈಗೊಂಡಿರೋ ಇಡಿ ಅಧಿಕಾರಿಗಳು ರನ್ಯಾ ರಾವ್ ಳ ಗೋಲ್ಡ್ ಸಿಂಡಿಕೇಟ್ ಮೆಂಬರ್ ಗಳನ್ನ ಪತ್ತೆಹಚ್ಚಲು ಮುಂದಾಗಿದ್ದಾರೆ. ಇತ್ತ ಇಡಿ ಅಧಿಕಾರಿಗಳು ವೈಟ್ ಗೋಲ್ಡ್ ಮಾಲೀಕ ಟಿ.ಜೆ ರಾವ್, ನಟಿ ರನ್ಯಾ ಪತಿ ಜತೀನ್ ಹುಕ್ಕೇರಿ ಸೇರಿ ಹಲವರ ಕಂಪನಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸ್ತದ್ದಾರೆ. ಇತ್ತ ವೈಟ್ ಗೋಲ್ಡ್ ಕಂಪನಿ ಮಾಲೀಕ ಟೆಜೆ ರಾವ್ ಮನೆಯಲ್ಲಿ ಬಂಗಾರದ ಖಜಾನೆಯೇ ಪತ್ತೆಯಾಗಿದೆ. ಇದರಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದ ಚಿನ್ನ ಎಷ್ಟು ಅಸಲಿ ಎಷ್ಟು ಅನ್ನೋದು ಅಧಿಕಾರಿಗಳ ತನಿಖೆಯಿಂದ ತಿಳಿದು ಬರಬೇಕಿದೆ.
ಹಾಗಾದ್ರೆ, ಹೆಸರು ಮಾತ್ರ ವೈಟ್ ಗೋಲ್ಡ್ ಕಂಪನಿ. ಒಳಗೆ ನಡೀತೀರೋದೆಲ್ಲಾ ಬ್ಲಾಕ್ ದಂಧೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಹಾಗಾದ್ರೆ ವೈಟ್ ಗೋಲ್ಡ್ ಅಕ್ರಮ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಇನ್ನಟ್ಟು ನಟ-ನಟಿಯರಿದ್ದಾರಾ.. ಯಾರ ಮೂಲಕ ಗೋಲ್ಡ್ ಸ್ಮಗ್ಲಿಂಗ್ ದಂಧೆ ಮಾಡ್ತಿದ್ರು ಅನ್ನೋ ಸಂಗತಿ ಇಡಿ ಹಾಗೂ ಸಿಬಿಐ ತನಿಖೆಯಲ್ಲಿ ಹೊರಬರಬೇಕಿದೆ..