ಧಾರವಾಡ : ಧಾರವಾಡದಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಕುಣಿದು ಕುಪ್ಪಳಿಸಿದ್ದಾರೆ. ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು ಧಾರವಾಡ ನಗರದ ಎಲ್ ಐ ಸಿ ಬಳಿ ರೇನ್ ಡಾನ್ಸ್ ಆಯೋಜನೆ ಮಾಡಿದ್ದು, ಕೈಯಲ್ಲಿ ಭಗವಾ ಧ್ವಜ ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಧಾರವಾಡದ ಹೋಳಿ ಹಬ್ಬದ ವಿಶೇಷ ಎಂದರೆ ಅದು ಯುವಕ ಯುವತಿಯರು ಸೇರಿ ಹಬ್ಬ ಮಾಡೋದು. ಯಾವುದೇ ತೊಂದರೆ ಆಗದಂತೆ ಜನರು ಹಬ್ಬ ಮಾಡುತಿದ್ದಾರೆ. ಇದೊಂದು ಒಳ್ಳೆಯ ಸಂದೇಶ ಎಂದಿದ್ದಾರೆ.