ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಗೋ ಅದೇ ರೀತಿ ಕಸದ ಸಮಸ್ಯೆಯೂ ಸಹ ಇದೆ. ನಗರದಲ್ಲಿ ಆಗಾಗ ಕಸದ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ಈಗ ಮತ್ತೆ ಸಮರ್ಪಕ ಕಸ ವಿಲೇವಾರಿಯಲ್ಲಿ ಬಿಬಿಎಂಪಿ ಹೊಸ ತಂತ್ರ ಉಪಯೋಗಿಸಿದೆ. ಏಪ್ರಿಲ್ 1 ರಿಂದ ಕಸಕ್ಕೂ ಸೇವಾ ಶುಲ್ಕ ಪಾವತಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ತೆರಿಗೆ ಅಲ್ಲ. ಸರ್ವಿಸ್ ಚಾರ್ಜ್. ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು. ವಿದ್ಯುತ್ ಬಿಲ್ ರೀತಿ ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವಿಸ್ ಚಾರ್ಜ್ ಹಾಕಲಾಗುತ್ತದೆ ಎಂದು ವಿವರಿಸಿದರು.
ನಗರದಲ್ಲಿ ಕಸ ವಿಲೇವಾರಿಯಾಗದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಸ ವಿಲೇವಾರಿ ಒಂದು ದಿನ ಸ್ಥಗಿತವಾಗಿದೆ, ರಾತ್ರಿಯಿಡಿ ಅನ್ ಲೋಡ್ ಮಾಡಲಾಗುತ್ತಿದೆ. ಅವರನ್ನು ಮನವೊಲಿಸಲು ಯಶಸ್ವಿಯಾಗಿದ್ದು ರಾತ್ರಿ ವೇಳೆ ಕಸ ವಿಲೇವಾರಿ ಆಗಲಿದೆ ಎಂದು ತಿಳಿಸಿದರು.