ಕೊಪ್ಪಳ: ಜಿಲ್ಲೆಯ ಸಾಣಾಪುರದಲ್ಲಿ ವಿದೇಶಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಘಟನೆ ಕೊಪ್ಪಳದಲ್ಲಿ ಹೋಳಿ ಆಚರಣೆ ಮೇಲೂ ಕರಿಛಾಯೆ ಬಿದ್ದಿತ್ತು. ಸಾಣಾಪುರ ಘಟನೆಯ ನಂತರವೂ ಬಂದ ವಿದೇಶಿ ಪ್ರವಾಸಿಗರು ಸರಳವಾಗಿ ನಡೆದ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಕಳೆದ ವರ್ಷಗಳಲ್ಲಿ ವಿರುಪಾಪುರ ಗಡ್ಡೆ ಸೇರಿದಂತೆ ತುಂಗಾಭದ್ರಾ ನದಿತೀರದ ಪ್ರದೇಶಗಳಲ್ಲಿ ವಿದೇಶಿಯರು ಭರ್ಜರಿಯಾಗಿ ನಡೆಯುತ್ತಿದ್ದ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಸಾಣಾಪುರ ಘಟನೆಯ ನಂತರ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುವ ವಿದೇಶಿಯರ ಸಂಖ್ಯೆ ಕಡಿಮೆಯಾಗಿದೆ. ನಿಯಮಾವಳಿ ಅನುಸರಿಸಿ ಹಬ್ಬ ಆಚರಿಸಬಹುದು ಎಂಬ ಕೊಪ್ಪಳ ಜಿಲ್ಲಾಡಳಿತ ಸೂಚನೆ ಬಳಿಕ ವಿದೇಶಿಯರಿಗೂ ಬಣ್ಣ ಹಾಕಿ ಹೋಳಿ ಆಚರಿಸಲಾಗುತ್ತಿದೆ..